ಗುಜರಾತ್: ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ/ಹತ್ಯೆ- ಮೂವರ ಬಂಧನ

0
739

ಸನ್ಮಾರ್ಗ ವಾರ್ತೆ-

ಮೊಡಾಸ, ಜ. 13: ಗುಜರಾತಿನಲ್ಲಿ ದಲಿತ ಮಹಿಳೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಯೆಸಗಿ ನೇತು ಹಾಕಿದ ಘಟನೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದರು. ಆರವಲ್ಲಿ ಜಿಲ್ಲೆ ಮೊಡಾಸ ತಾಲೂಕಿನಲ್ಲಿ ಈ ತಿಂಗಳು ಒಂದನೆ ತಾರೀಕಿನಂದು ಮನೆಯಿಂದ ಮೊಡಾಸ ನಗರಕ್ಕೆ ಹೋಗಿದ್ದ ಯುವತಿಯ ಮೃತದೇಹ ಮರುದಿವಸ ಮರದಲ್ಲಿ ತೂಗಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ನಡೆದ ತನಿಖೆಯಲ್ಲಿ ಯುವತಿ ಕ್ರೂರ ಅತ್ಯಾಚಾರಕ್ಕೊಳಗಾಗಿದ್ದು ಪತ್ತೆಯಾಗಿತ್ತು. ಸಂಬ೦ಧಿಕರು ಪ್ರತಿಭಟನೆಗಿಳಿದ ನಂತರ ವಿಮಲ್ ಭಾವಾಡ್, ದರ್ಶನ್ ಭಾರ್‍ವಾಡ್ ,ಜಿಗರ್ ಪರ್ಮಾರ್ ಎಂಬವರನ್ನು ರವಿವಾರ ರಾತ್ರೆ ಬಂದಿಸಲಾಗಿದೆ. ಇನ್ನೊಬ್ಬ ಆರೋಪಿ ತಲೆ ತಪ್ಪಿಸಿಕೊಂಡಿದ್ದಾನೆ.

ಪೊಲೀಸರ ಪ್ರಥಮ ತನಿಖಾ ವರದಿ ಪ್ರಕಾರ ನಾಲ್ವರ ತಂಡ ಯುವತಿಯನ್ನು ಕಾರಿನಲ್ಲಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿತ್ತು. ಕೊಲೆ ಮಾಡಿದ ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲಿಕ್ಕಾಗಿ ಮೃತದೇಹವನ್ನು ಮರಕ್ಕೇ ನೇತು ಹಾಕಿದ್ದರು. ಇದೇವೇಳೆ. ಪೋಸ್ಟ್ ಮಾರ್ಟಂ ವರದಿಯಲ್ಲಿ ಅತ್ಯಾಚಾರವಾಗಿದ್ದು ಬಹಿರಂಗವಾಗಿತ್ತು. ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.