ಕೇರಳ: ಸಂವಿಧಾನ ರಕ್ಷಣಾ ಮಹಾರಾಲಿಯ ಪ್ರಚಾರ ವಾಹನ ತಡೆದ ಪೊಲೀಸ್ ಅಮಾನತು

0
723

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್, ಜ. 15: ನಗರದಲ್ಲಿ ನಡೆದ ಸಂವಿಧಾನ ರಕ್ಷಣಾ ಮಹಾರಾಲಿಯ ಪ್ರಚಾರ ವಾಹನವನ್ನು ತಡೆದು ಅದರಲ್ಲಿದ್ದವರನ್ನು ನಿಂದಿಸಿದ ಸಿವಿಲ್ ಪೊಲೀಸ್ ಆಫಿಸರ್ ಶ್ರೀಜಿತ್ ಕುಮಾರ್ ರನ್ನು ಸಿಟಿ ಪೊಲೀಸ್ ಮುಖ್ಯಸ್ಥ ಎ ವಿ ಜಾರ್ಜ್ ಅಮಾನತುಗೊಳಿಸಿದ್ದಾರೆ. ಸಂವಿಧಾನ ರಕ್ಷಣಾ ಸಮಿತಿ ಕೋಝಿಕ್ಕೋಡಿನಲ್ಲಿ ನಡೆಸಿದ ಮಹಾರಾಲಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದ್ದರು. ಇದರ ಪ್ರಚಾರ ವಾಹನವನ್ನು ಎಲತ್ತೂರ್ ಪೊಲೀಸ್ ಠಾಣೆಯ ಮುಂದೆ ಎಸ್ಸೈಯ ಸೂಚನೆ ಪ್ರಕಾರ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಆದರೆ ಅನೌನ್ಸ್ ಮೆಂಟ್‍ಗೆ ಅನುಮತಿ ಪಡೆಯಲಾಗಿದೆ ಎಂದ ಬಳಿಕ ವಾಹನವನ್ನು ಬಿಟ್ಟುಕೊಡಲಾಗಿತ್ತು.

ಈ ನಡುವೆ ಶ್ರೀಜಿತ್ ಕುಮಾರ್ ವಾಹನದೊಳಗಿದ್ದವರಲ್ಲಿ ಕೆಟ್ಟದಾಗಿ ವರ್ತಿಸಿ ನಿಂದಿಸಿದ್ದ. ಘಟನೆ ವಿವಾದವಾದೊಡನೆ ಸ್ಪೆಷಲ್ ಬ್ರಾಂಚ್ ಅಸಿಸ್ಟೆಂಟ್ ಕಮಿಶನರ್ ಕೆ. ಸುದರ್ಶನ್ ಘಟನೆಯ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ವರದಿಯಾಧಾರದಲ್ಲಿ ಪೊಲೀಸ್ ರ ವಿರುದ್ಧ ಕ್ರಮ ಜರಗಿಸಬೇಕೆಂದು ಸಿಪಿಎಂ ಜಿಲ್ಲಾ ಸಮಿತಿ ಆಗ್ರಹಿಸಿತ್ತು.