ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಜ. 17: ಪೌರತ್ವ ತಿದ್ದುಪಡಿ ಕಾನೂನು ಹಿಂಪಡೆಯಲು ಭಾರತದ ಮೇಲೆ ಒತ್ತಡ ಹಾಕಬೇಕೆಂದು ಅಮೆರಿಕದ ಸೆನೆಟ್ ಕಾರ್ಯದರ್ಶಿ ಮೈಕ್ ಪೊಂಪಿಯೊರಿಗೆ ಸೆನೆಟ್ ಫಾರಿನ್ ರಿಲೇಶನ್ಸ್ ಸಮಿತಿ ಸದಸ್ಯರಾದ ಸೆನಟರ್ ಬಾಬ್ ಮೆನಿಂಡಸ್ ಆಗ್ರಹಿಸಿ ಪತ್ರ ನೀಡಿದ್ದಾರೆ.
ಪ್ರಜಾಪ್ರಭುತ್ವದ ಮೌಲ್ಯಗಳು, ಸ್ವಾತಂತ್ರ್ಯ, ಮಾನವಹಕ್ಕು ಸಂರಕ್ಷಿಸಲು ಅಮೆರಿಕದ ಸರಕಾರ ಮುಂದೆ ಬರಬೇಕು. ಧರ್ಮ ನೋಡದೆ ಭಾರತದ ಎಲ್ಲರ ಮಾನವಹಕ್ಕು ಸಂರಕ್ಷಿಸಬೇಕೆಂದು ಅವರು ಹೇಳಿದರು. ಧರ್ಮ ಆಧಾರವಾಗಿಟ್ಟು ಪೌರತ್ವ ನೀಡುವುದು ಭಾರತದ ಸಂವಿಧಾನ ಮತ್ತು ಅಂತಾರಾಷ್ಟ್ರೀಯ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಬಾಬ್ ಹೇಳಿದರು. ರಾಷ್ಟ್ರೀಯ ಪೌರತ್ವ ಪಟ್ಟಿ ಭಾರತದ ಮುಸ್ಲಿಮರನ್ನು ಈಗಾಗಲೇ ಪ್ರತಿಕೂಲವಾಗಿ ಬಾಧಿಸಿದೆ. ಅಸ್ಸಾಮಿನಲ್ಲಿ ಹತ್ತೊಂಬತ್ತು ಲಕ್ಷ ಮಂದಿಗೆ ಪೌರತ್ವ ಇಲ್ಲದಾಗಿದೆ. ಇಂತಹ ಕ್ರಮಗಳು ಭಾರತದ ಜಾತ್ಯತೀತ, ಪ್ರಜಾಪ್ರಭುತ್ವಕ್ಕೆ ಸವಾಲು ಹಾಕುತ್ತಿವೆ ಎಂದು ಅವರು ಹೇಳಿದರು. ಕಾಶ್ಮೀರದ 370ನೆ ವಿಧಿ ರದ್ದುಪಡಿಸಿದ ಬಳಿಕ ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಬಂದಿಲ್ಲ ಎಂದು ಪೊಂಪಿಯೊ ಪತ್ರದಲ್ಲಿ ಸೂಚಿಸಿದ್ದಾರೆ.












