ಕಲ್ಲಿಕೋಟೆ, ಜ.18: ರಾಹುಲ್ ಗಾಂಧಿ ಸಂಸದನಾಗಿ ಆಯ್ಕೆ ಮಾಡಿದ್ದು ಕೇರಳ ಮಾಡಿದ ವಿನಾಶಕಾರಿ ಕೆಲಸ ಎಂದು ಇತಿಹಾಸಕಾರ ರಾಮಚಂದ್ರ ಗುಹ ಹೇಳಿದರು. ಭಾರತದ ರಾಜಕೀಯದಲ್ಲಿ ನರೇಂದ್ರ ಮೋದಿಯ ವಿರುದ್ಧ ರಾಹುಲ್ರಿಗೆ ಯಾವ ಸಾಧ್ಯತೆಗಳೂ ಇಲ್ಲ ಎಂದು ಅವರು ಹೇಳಿದರು. ಸ್ವಾತಂತ್ರ್ಯ ಹೋರಾಟದ ಪರಂಪರೆಯ ಪಾರ್ಟಿ ಕಾಂಗ್ರೆಸ್. ಆದರೆ ಈಗ ಕುಟುಂಬ ಆಧಿಪತ್ಯದ ಪಾರ್ಟಿಯಾಗಿ ಅದು ಅಧಃಪತನವಾಗಿದೆ. ಇದು ಭಾರತದಲ್ಲಿ ಹಿಂದುತ್ವ ರಾಜಕೀಯ ಬರುವುದಕ್ಕೆ ಪ್ರಧಾನ ಕಾರಣವಾಗಿದೆ ಎಂದು ರಾಮಚಂದ್ರ ಗುಹ ಹೇಳಿದರು.
ನಾನು ರಾಹುಲ್ ಗಾಂಧಿಯವರ ವಿರೋಧಿಯಲ್ಲ. ಅವರು ಉತ್ತಮ ವ್ಯಕ್ತಿ. ಭಾರತದ ಯುವಕರಿಗೆ ಐದನೇ ತಲೆಮಾರಿನ ಕುಟುಂಬ ಆಧಿಪತ್ಯದ ನಾಯಕನ ಅಗತ್ಯವಿಲ್ಲ. ರಾಹುಲ್ ಗಾಂಧಿಯನ್ನು ಕೇರಳಿಯರು ಪುನಃ ಆಯ್ಕೆ ಮಾಡದರೆ ಮೋದಿಗೆ 2024ರ ಕಾರ್ಯಗಳು ಹೆಚ್ಚು ಸುಲಭವಾಗಲಿದೆ ಎಂದು ಅವರು ಹೇಳಿದರು. ಕೇರಳದಲ್ಲಿ ಪೌರತ್ವ ಕಾನೂನು ವಿರೋಧಿಸಿ ನಡೆಯುವ ಪ್ರತಿಭಟನೆಯನ್ನು ಅವರು ಅಭಿನಂದಿಸಿದರು.












