ಅಫ್ಝಲ್ ಗುರುವನ್ನು ಬಲಿಪಶು ಮಾಡಲಾಗಿದೆ: ದೇವಿಂದರ್ ಸಿಂಗ್ ವಿರುದ್ಧ ತನಿಖೆ ನಡೆಯಬೇಕು- ನಟಿ ಸೋನಿ ರಝ್ದಾನ್

0
1280

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 22: ಪಾರ್ಲಿಮೆಂಟು ದಾಳಿ ಪ್ರಕರಣದಲ್ಲಿ ಗಲ್ಲಿಗೇರಿಸಲಾಗಿದ್ದ ಅಫ್ಝಲ್ ಗುರುವನ್ನು ಬಲಿಪಶು ಮಾಡಲಾಗಿದೆ ಎಂದು ಬಾಲಿವುಡ್ ನಟಿ ಮತ್ತು ಆಲಿಯ ಭಟ್‍ರ ತಾಯಿ ಸೋನಿ ರಝ್ದಾನ್ ಹೇಳಿದ್ದಾರೆ. ನ್ಯಾಯದ ವ್ಯಂಗ್ಯ ಇದು. ಅಪರಾಧಿಯಲ್ಲದಿದ್ದರೂ ಮೃತ ವ್ಯಕ್ತಿಯನ್ನು ನಮಗೆ ಮರಳಿ ತರಲು ಸಾಧ್ಯವಿದೆಯೇ ಎಂದು ಸೋನಿ ಪ್ರಶ್ನಿಸಿದರು. ಇಂತಹ ಘಟನೆ ಉಂಟಾಗುವುದರಿಂದ ಗಲ್ಲು ಶಿಕ್ಷೆಯನ್ನು ಹೆಚ್ಚು ಮಂದಿ ವಿರೋಧಿಸುತ್ತಾರೆ ಎಂದು ಅವರು ಹೇಳಿದರು.

ಯಾಕೆ ಅಫ್ಝಲ್ ಗುರು ಹೇಳಿದ ವಿಷಯವನ್ನು ಯಾರೂ ತನಿಖೆ ಮಾಡುತ್ತಿಲ್ಲ. ಕಾಶ್ಮೀರದ ಭಯೋತ್ಪಾದಕರೊಂದಿಗೆ ಬಂಧಿಸಲಾದ ದೇವಿಂದರ್ ಸಿಂಗ್ ನ ವಿರುದ್ಧ ಅಫ್ಝಲ್ ಗುರು ಎತ್ತಿದ ಆರೋಪಗಳನ್ನು ಯಾಕೆ ತನಿಖಿಸುವುದಿಲ್ಲ ಎಂದು ಸೋನಿ ಕೇಳಿದರು. ಇದೇವೇಳೇ ಸೋನಿಯವರ ಟ್ವೀಟ್ ವಿವಾದ ಸೃಷ್ಟಿಸಿದೆ. ನಂತರ ಪುನಃ ಸೋನಿ ಟ್ವೀಟ್ ಮಾಡಿದರು. ಅಫ್ಝಲ್ ಗುರು ನಿರಪರಾಧಿ ಎಂದಿಲ್ಲ. ಆದರೆ ಆತ ದೇವಿಂದರ್ ಸಿಂಗ್ ವಿರುದ್ಧ ಆರೋಪ ಹೊರಿಸಿದರೂ ಯಾಕೆ ಅದನ್ನು ತನಿಖೆ ಮಾಡಿಲ್ಲ ಎಂದು ಟ್ವೀಟ್‍ನಲ್ಲಿ ಪ್ರಶ್ನಿಸಿದ್ದೇನೆ ಎಂದು ಸೋನಿ ಹೇಳಿದ್ದಾರೆ.