ಸನ್ಮಾರ್ಗ ವಾರ್ತೆ
ಕೋಝಿಕ್ಕೋಡ್, ಜ. 22: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆಯನ್ನು ಮುಂದುವರಿಸಬೇಕೆಂದು ಅಖಿಲ ಭಾರತ ಸುನ್ನಿ ಜಮ್ಇಯ್ಯತ್ತುಲ್ ಉಲೇಮಾದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಅನುಕೂಲಕರ ತೀರ್ಮಾನ ಬರುವವರೆಗೂ ಪ್ರತಿಭಟನೆಯನ್ನು ಮುಂದುವಿರಸಲು ಅವರು ಆಗ್ರಹಿಸಿದ್ದಾರೆ.
ಈ ವಿಷಯದಲ್ಲಿ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟು ಯಾಕೆ ನಾಲ್ಕು ವಾರಗಳ ಸಮಯ ನೀಡಿದೆ ಎಂದು ಅರ್ಥವಾಗಿಲ್ಲ. ಸುಪ್ರೀಂಕೋರ್ಟಿನ ಮೇಲೆ ನಿರೀಕ್ಷೆ ಇದೆ. ಒಮ್ಮತದಿಂದ ಹೋರಾಟ ಮುಂದುವರಿಸಬೇಕಾಗಿದೆ ಎಂದು ಹೇಳಿದರು.












