ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 22: ಸುಪ್ರೀಂಕೋರ್ಟು ಮಾಜಿ ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ವಿರುದ್ಧ ಲೈಂಗಿಕ ಆರೋಪ ಹೊರಿಸಿದ ಮಹಿಳೆಯನ್ನು ಪುನಃ ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ತನ್ನ ವಿರುದ್ಧ ಹಲವು ಬಾರಿ ನಡೆದ ವರ್ಗಾವಣೆಯನ್ನು ಪ್ರಶ್ನಿಸಿ ಅನುಮತಿ ಪಡೆಯದೆ ರಜೆ ತೆಗೆದುಕೊಂಡದ್ದಕ್ಕಾಗಿ ಕೆಲಸದಿಂದ ವಜಾಗೊಳಿಸಲಾಗಿತ್ತು.
2019 ಎಪ್ರಿಲ್‍ನಲ್ಲಿ ಅಂದಿನ ಚೀಫ್ ಜಸ್ಟಿಸ್ ರಂಜನ್ ಗೊಗೊಯ್ ವಿರುದ್ಧ ಕೋರ್ಟು ಉದ್ಯೋಗಿಯಾದ ಈ ಮಹಿಳೆ ಲೈಂಗಿಕ ಆರೋಪವನ್ನು ಹೊರಿಸಿದ್ದರು. ರಂಜನ್ ಗೊಗೊಯಿ ತನಗೆ ಕಿರುಕುಳ ಕೊಟ್ಟಿದ್ದಾರೆ ಎಂದು ಮಹಿಳೆ ದೇಶದ 22 ನ್ಯಾಯಾಧೀಶರಿಗೆ ಪತ್ರ ಬರೆದಿದ್ದರು.












