ಸನ್ಮಾರ್ಗ ವಾರ್ತೆ
ಬೆಂಗಳೂರು, ಜ. 24: ಮುಸ್ಲಿಮರ ವಿರುದ್ಧ ಪುನಃ ದ್ವೇಷಪೂರಿತ ಹೇಳಿಕೆ ನೀಡಿರುವ ಹೊನ್ನಾಳಿಯ ಬಿಜೆಪಿ ಶಾಸಕ ಮತ್ತು ಮುಖ್ಯಮಂತ್ರಿಯೆಡಿಯೂರಪ್ಪರ ರಾಜಕೀಯ ಸಲಹೆಗಾರ ರೇಣುಕಾಚಾರ್ಯ ಅವರು, ಮುಸ್ಲಿಮರ ಮತ ಯಾಚಿಸಲಾರೆ ಎಂದು ಹೇಳಿದ್ದಾರೆ. ಅವರಿಗೆ ತನ್ನ ಕ್ಷೇತ್ರದಲ್ಲಿ ವಿಶೇಷ ನಿಧಿಯನ್ನು ಕೊಡುವುದಿಲ್ಲ. ಮದ್ರಸಾಗಳು ಭಯೋತ್ಪಾನೆಯ ಕೇಂದ್ರಗಳಾಗಿವೆ. ಇಂತಹ ಸಂಸ್ಥೆಗಳು ಕಾರ್ಯ ನಿರ್ವಹಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಅವರು ಈ ಹಿಂದೆ ಮಸೀದಿಗಳ ವಿರುದ್ಧ ಗಂಭೀರ ಆರೋಪ ಹೊರಿಸಿದ್ದರು. ಅಲ್ಲಿ ಆಯುಧಗಳನ್ನು ಸಂಗ್ರಹಿಸಿಡಲಾಗುತ್ತಿದೆ ಎಂದು ಹೇಳಿದ್ದರು. ಆಗ, ಅವರ ಹೇಳಿಕೆಗೂ ಬಿಜೆಪಿಗೂ ಸಂಬಂಧ ವಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದರು. ಮದ್ರಸಾಗಳು ಯುವಕರಲ್ಲಿ ಭಯೋತ್ಪಾನದನೆಯನ್ನು ಉತ್ತೇಜಿಸುತ್ತಿದೆ. ಇಂತಹ ಅಧ್ಯಯನ ಕೇಂದ್ರಗಳು ನಮಗೆ ಅಗತ್ಯವಿದೆಯೇ? ಇಂದು ಭಯೋತ್ಪಾದನೆಯಲ್ಲಿ ಸಿಕ್ಕಿಹಾಕಿಕೊಂಡವರಲ್ಲಿ ಹೆಚ್ಚಿನವರು ಮುಸ್ಲಿಂ ಸಮುದಾಯವರು ಎಂದು ಅವರು ಹೇಳಿದರು. ಚುನಾವಣೆ ಬರುವಾಗ ಅವರು ಕಾಂಗ್ರೆಸ್, ಜೆಡಿಎಸ್ಗೆ ಮತಹಾಕುತ್ತಾರೆ ಎಂದು ಹೇಳಿದ್ದರು.
ಬಿಜೆಪಿ ಶಾಸಕನ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದು ಒಂದು ಸಮುದಾಯದ ವಿಕಾಸಕ್ಕಾಗಿ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ರೇಣುಕಾಚಾರ್ಯ ಹೇಳುತ್ತಾರೆ. ಇಂತಹ ಸಲಹೆಗಳನ್ನು ಅವರು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ನೀಡುತ್ತಿದ್ದಾರೆಯೇ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.












