ಕಟ್ಟಡ ಕಾರ್ಮಿಕರಲ್ಲಿ ಬಾಂಗ್ಲಾ ದೇಶದವರಿದ್ದಾರೆ,ಆಹಾರ ಕ್ರಮವೇ ಅವರ ಗುರುತು- ವಿಜಯ್ ವರ್ಗೀಯ

0
575

ಸನ್ಮಾರ್ಗ ವಾರ್ತೆ

ಇಂದೋರ್, ಜ. 24: ಕಟ್ಟಡ ನಿರ್ಮಾಣ ಕಾರ್ಮಿಕರಲ್ಲಿ ಕೆಲವು ಬಾಂಗ್ಲಾ ದೇಶಿಯರು ಇದ್ದಾರೆಂದು ಸಂದೇಹವಿದೆ, ಅವರನ್ನು ಅವರ ಆಹಾರದ ರೀತಿಯಿಂದ ಗುರುತಿಸಲಾಗಿದೆ ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಹೇಳಿದರು. ಪೌರತ್ವ ತಿದ್ದುಪಡಿ ಕಾನೂನು ಬೆಂಬಲಿಸಿ ನಡೆದ ಸೆಮಿನಾರಿನಲ್ಲಿ ಅವರು ಮಾತಾಡುತ್ತಿದ್ದರು.

ಮನೆಯ ಕೆಲಸಕ್ಕೆ ಇತ್ತೀಚೆಗೆ ಬಂದ ಕಾರ್ಮಿಕರಲ್ಲಿ ಕೆಲವರು ಬಾಂಗ್ಲ ದೇಶದವರು ಇದ್ದಾರೆಂದು ಅನಿಸಿತು. ಅವರ ವಿಚಿತ್ರ ಆಹಾರ ರೀತಿಯಿಂದ ಅವರ ಪೌರತ್ವದ ಕುರಿತು ಸಂದೇಹವಾಯಿತು. ಆದರೆ ಪೊಲೀಸು ದೂರು ನೀಡಲಿಲ್ಲ. ಜನರು ಎಚ್ಚರ ವಹಿಸಲಿಕ್ಕಾಗಿ ನಾನು ಇದನ್ನು ಹೇಳಿದ್ದೇನೆ ಎಂದು ಬಿಜೆಪಿ ನಾಯಕ ಹೇಳಿದರು. ಈ ದೇಶದಲ್ಲಿ ಏನು ನಡೆಯುತ್ತಿದೆ? ಹೊರಗಿನಿಂದ ಜನರು ದೇಶದೊಳಗೆ ಬಂದು ಭಯೋತ್ಪಾದನೆ ಹರಡುತ್ತಿದ್ದಾರೆ. ಒಂದೂವರೆ ವರ್ಷದಿಂದ ಆಯುಧ ಧಾರಿಗಳಾದ ಬಾಂಗ್ಲಾ ಭಯೋತ್ಪಾದಕರು ನನ್ನನ್ನು ಹಿಂಬಾಲಿಸುತ್ತಿದ್ದಾರೆ. ವದಂತಿಗಳನ್ನು ಕೇಳಿ ತಪ್ಪು ಕಲ್ಪನೆಗೊಳಗಾಗಬೇಡಿರಿ. ನಿಜವಾದ ನಿರಾಶ್ರಿತರಿಗೆ ಅಭಯ ನೀಡಲು ಮತ್ತು ದೇಶ ಸುರಕ್ಷಗೆ ಬೆದರಿಕೆಯಾದವರನ್ನು ಗುರುತಿಸಲು ಪೌರತ್ವ ಕಾನೂನು ತರಲಾಗಿದೆ ಎಂದು ವಿಜಯ ವರ್ಗೀಯ ಹೇಳಿದರು.