ಸಿಎಎ, ಎನ್‍ಆರ್ ಸಿ ವಿರುದ್ಧ ಪ್ರತಿಭಟನೆ: ಉತ್ತರ ಪ್ರದೇಶ ಸರಕಾರ ಕೇಸು ವಾಪಸು ಪಡೆಯಲಿ- ಮಾಯಾವತಿ

0
628

ಸನ್ಮಾರ್ಗ ವಾರ್ತೆ

ಲಕ್ನೊ, ಜ. 27: ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರು ಸಿಎಎ, ಎನ್‍ಆರ್ ಸಿ ಕುರಿತು ಕೇಂದ್ರ ಸರಕಾರವನ್ನು ಮತ್ತೊಮ್ಮೆ ಟೀಕಿಸಿದ್ದಾರೆ. ಸಿಎಎ, ಎನ್‍ಆರ್ ಸಿ ವಿರೋಧಿ ಪ್ರತಿಭಟನೆ ಮಾಡಿದರ ಮೇಲೆ ಹೂಡಲಾದ ಕೇಸು ಹಿಂಪಡೆಯಬೇಕೆಂದು ಹೇಳಿದ್ದಾರೆ. ಉತ್ತರ ಪ್ರದೇಶ ¸ಬಿಜೆಪಿ ಸರಕಾರ ತಪ್ಪು ಕೇಸು ಹಾಕಿ ಹೋರಾಟಗಾರರನ್ನು ಬಂಧಿಸಿದೆ. ಈ ಪ್ರತಿಭಟನೆಯಲ್ಲಿ ಹಾಕಲಾದ ಕೇಸನ್ನು ಹಿಂಪಡೆಯಬೇಕು. ಜೀವ ಕಳಕೊಂಡವರಿಗೆ ಸಹಾಯ ಮಾಡಬೇಕೆಂದು ಮಾಯಾವತಿ ಆಗ್ರಹಿಸಿದರು.

ಈಗಾಗಲೇ ಮಾಯಾವತಿ ಸಿಎಎ ಮತ್ತು ಎನ್‍ಆರ್ ಸಿ ವಿರುದ್ಧ ತನ್ನ ನಿಲುವನ್ನು ತಿಳಿಸಿದ್ದಾರೆ. ಈ ಕಾನೂನು ಅಸಂವಿಧಾನಿಕ ಎಂದು ಹೇಳಿದ್ದು, ಕೂಡಲೇ ಕೇಂದ್ರ ಸರಕಾರ ಸಿಎಎ, ಎನ್‍ಆರ್ ಸಿಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದ್ದರು.