ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 27: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೆಚ್ಚುತ್ತಿರುವ ನಿರುದ್ಯೋಗದ ಕುರಿತು ಪ್ರಸ್ತಾಪಿಸಿ ಕೇಂದ್ರ ಸರಕಾರವನ್ನು ಉಗ್ರವಾಗಿ ಟೀಕಿಸಿದ್ದಾರೆ. ಕೆಲಸ ಕೊಡುವ ಭರವಸೆ ಕೊಟ್ಟವರು ಸುಮ್ಮಗಿದ್ದಾರೆ. ದೇಶದ ದೊಡ್ಡ ಏಳು ಕ್ಷೇತ್ರಗಳಲ್ಲಿ ಸುಮಾರು ಮೂರುವರೆ ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ. ದೊಡ್ಡ ದೊಡ್ಡ ಹೆಸರುಗಳು, ಪ್ರಕಟಣೆಗಳ ಪರಿಣಾಮ ಏನೆಂದರೆ ಮೂರು ಕೋಟಿ ಅರುವತ್ತನಾಲ್ಕು ಲಕ್ಷ ಮಂದಿ ನಿರುದ್ಯೋಗಿಗಳಾದರು. ಈಗ ಸರಕಾರ ಉದ್ಯೋಗದ ಕುರಿತು ಮಾತಾಡಲು ಹೆದರುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದರು.
ಬೆಲೆಯೇರಿಯ ಕುರಿತು ಪ್ರಿಯಾಂಕಾ ಈ ಹಿಂದೆಯೂ ಕೇಂದ್ರ ಸರಕಾರದ ವಿರುದ್ಧ ದಾಳಿ ಮಾಡಿದ್ದರು. ಕೆಲವು ದಿನಗಳ ಹಿಂದೆ ಪ್ರಿಯಾಂಕಾ ತರಕಾರಿ, ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ತರಕಾರಿ, ಆಹಾರ ವಸ್ತುಗಳು ದುಬಾರಿಯಾದರೆ ಜನರು ತಿನ್ನುವುದು ಏನನ್ನು ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದರು.












