ಮುಖಕ್ಕೆ ಹೊಡೆದರು, ಕೂದಲು ಹಿಡಿದು ಎಳೆದರು; ಥಾಣೆಯಲ್ಲಿ ಮಹಿಳೆಯರ ಮೇಲೆ ಶಿವಸೇನೆ ದಾಳಿ

0
3

ಸನ್ಮಾರ್ಗ ವಾರ್ತೆ

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಮಹಿಳೆಯರ ಮೇಲೆ ಶಿವಸೇನೆಯ ಮಹಿಳಾ ವಿಂಗ್ ಕಾರ್ಯಕರ್ತರು ಹಲ್ಲೆ ನಡೆಸಿದ್ದು ತಲವ್ ಪಾಲಿ ಎಂಬಲ್ಲಿ ಘಟನೆ ನಡೆದಿದೆ. ಮಹಿಳೆಯರಿಗೆ ಹೊಡೆದು ಸ್ಥಳದಿಂದ ಬಲವಂತವಾಗಿ ತೆರವುಗೊಳಿಸಿದರು ಎಂದು ವರದಿ ತಿಳಿಸಿದೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಂಡ ನಂತರ ವಿವಾದ ತೀವ್ರ ಸ್ವರೂಪ ತೆಗೆದು ಕೊಂಡಿತು.

ಶಿವಸೇನೆಯ ಮಹಿಳಾ ಆಘಾಡಿ ವಿಭಾಗದ ಕಾರ್ಯಕರ್ತೆಯರು ಮಹಿಳೆಯರಿಗೆ ಹಲ್ಲೆ ನಡೆಸಿದ್ದು ಎಂದು ವೀಡಿಯೊದಲ್ಲಿ ಹೇಳಲಾಗುತ್ತಿದೆ. ಮಹಿಳೆಯರ ಮುಖಕ್ಕೆ ಹೊಡೆದು ಇವರು ಅಸಭ್ಯವಾಗಿ ವರ್ತಿಸಿದದಾರೆ. ಕೆಲವು ಮಹಿಳೆಯರ ಕೂದಲು ಹಿಡಿದು ಎಳೆದಿದ್ದಾರೆ. ಕಬ್ಬಿನ ತುಂಡಿನಿಂದ ಹೊಡೆದಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಮಹಿಳಾ ಸೇನೆಯ ಕಾರ್ಯಕರ್ತೆಯರು ಹಲ್ಲೆ ನಡೆಸಿದ್ದು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸ್ಥಳೀಯ ಮಹಿಳೆಯರಿಗೆ ಈ ತರ ಕಿರುಕುಳ ನೀಡುತ್ತಿದ್ದಾರೆ. ಪೊಲೀಸರಿಗೆ ದೂರಿತ್ತರು ಕಾನೂನು ಕ್ರಮ ಕೈಗೊಂಡಿಲ್ಲ ಆದ್ದರಿಂದ ಸ್ವಯಂ ನಾವೇ ಮಧ್ಯಪ್ರವೇಶಿಸಬೇಕಾಯಿತು ಎಂದು ಸೇನೆಯ ಕಾರ್ಯಕರ್ತೆಯರು ತಿಳಿಸಿದದಾರೆ.

ಇದೇ ವೇಳೆ ವೀಡಿಯೊದಲ್ಲಿ ಕಾಣುವ ಮಹಿಳೆಯ ವ್ಯಕ್ತಿತ್ವ ಅವರು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪವು ಯಾವುದೇ ಮೂಲಗಳಿಂದ ದೃಢಪಟ್ಟಿಲ್ಲ. ಜೊತೆಗೆ ಘಟನೆಯ ಬಗ್ಗೆ ಪೊಲೀಸರಿಂದ ಪ್ರತಿಕ್ರಿಯೆಯು ಲಭ್ಯವಿಲ್ಲ. ಆದರೆ ಮಹಿಳೆಯರಿಗೆ ಶಿವಸೇನೆಯವರು ಹೊಡೆಯುವುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗುರಿಯಾಗಿದೆ.