ಸನ್ಮಾರ್ಗ ವಾರ್ತೆ
ಬೀಜಿಂಗ್, ಜ. 29: ಚೀನದಲ್ಲಿ ಕೊರೊನ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 132 ಕ್ಕೇರಿದೆ. 6000 ಮಂದಿಗೆ ಇದುವರೆಗೆ ರೋಗ ತಗಲಿದೆ ಎನ್ನಲಾಗಿದ್ದು 2002-03 ರಲ್ಲಿ ಜಗತ್ತನ್ನು ಕಂಪಿಸುವಂತೆ ಮಾಡಿದ್ದ ಸಾರ್ಸಿಗಿಂತ ಕೊರೊನೊ ತೀವ್ರವಾದುದೆನ್ನಲಾಗುತ್ತಿದೆ. ಕೊರೊನೊ ವೈರಸ್ ಚೀನದಲ್ಲಿ ಪ್ರತಿದಿನಾಲೂ ಹೆಚ್ಚಳವಾಗುತ್ತಿದೆ ಎಂದು ಅಮೆರಿಕ , ಜಪಾನ್ ತಮ್ಮ ಪ್ರಜೆಗಳನ್ನು ತೆರವುಗೊಳಿಸುವ ಕ್ರಮವನ್ನು ಆರಂಭಿಸಿದೆ. ವೈರಸ್ ತೀವ್ರವಾಗಿರುವ ವುಹಾನ್ನಿಂದ ಜನರನ್ನು ತೆರವುಗೊಳಿಸು ಕ್ರಮಕ್ಕೆ ಚಾಲನೆ ನೀಡಿದೆ. ಮಲೇಶ್ಯದಲ್ಲಿ ಮೂವರಿಗೆ ಕೊರೊನೊ ಇದೆ ಎಂದು ದೃಢವಾಗಿದೆ ಎಂದು ವರದಿಯಾಗಿದೆ. ಚೀನದಿಂದ ಬರುವವರು ಎರಡು ವಾರವಾದರೂ ಮನೆಯಿಂದ ಹೊರಗಿಳಿಯಬಾರದೆಂದು ಸೂಚನೆ ನೀಡಲಾಗಿದೆ.
ಇದೇ ವೇಳೆ ವುಹಾನ್ ಪ್ರಾಂತದ ಹೊರಗೆ ಕೊರೊನೊ ವೈರಸ್ ತಗಲಿದ್ದರಿಂದ ಒಂದು ಸಾವು ಮಾತ್ರ ಸಂಭವಿಸಿದ್ದು. ಕೊರೊನೊದಿಂದ ಸಾವು ನೋವುಗಳಾದ ವರದಿಯು ವುಹಾನ್ ರಾಜಧಾನಿ ಹುಬಿಯದಿಂದ ಹೆಚ್ಚು ವರದಿಯಾಗಿದೆ.












