ಸನ್ಮಾರ್ಗ ವಾರ್ತೆ
ಮಂಗಳೂರು; ಜ.30- ಮಹಾತ್ಮಾ ಗಾಂಧಿ ಹುತಾತ್ಮತೆಯನ್ನು ಸ್ಮರಿಸಿಕೊಂಡು ಇಂದು ( ಜ. 30) ವಿ ದ ಪೀಪಲ್ ಸಂಘಟನೆಯು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಂವಿಧಾನ ರಕ್ಷಣೆಯ ಧ್ಯೇಯದೊಂದಿಗೆ ಮಹಿಳೆಯರು ಒಂದು ದಿನದ ಸತ್ಯಾಗ್ರಹವನ್ನು ಆರಂಭಿಸಿದೆ.ಇವತ್ತು ಬೆಳಿಗ್ಗೆ ಸ್ಥಳದಲ್ಲಿ ಸೇರಿದ ಮಹಿಳೆಯರು ವಿವಿಧ ಘೋಷಣೆಗಳನ್ನು ಕೂಗಿ ಸತ್ಯಾಗ್ರಹವನ್ನು ಆರಂಭಿಸಿದರು. ಗಾಂಧೀಜಿ ಮತ್ತು ಅಂಬೇಡ್ಕರರ ಭಾವ ಚಿತ್ರವನ್ನು ಕೈಯಲ್ಲಿ ಹಿಡಿದು ಪ್ರತಿಭಟನಾಕಾರರು ಇವರಿಬ್ಬರ ಆಶಯಗಳನ್ನು ರಕ್ಷಿಸುವಂತೆ ಘೋಷಣೆ ಮೊಳಗಿಸಿದ್ದಾರೆ. ಸತ್ಯಾಗ್ರಹ ನಿರತ ಮಹಿಳೆಯರು ಗಾಂಧೀ ಹತ್ಯೆಯಾದ ಸಮಯವಾದ ಸಂಜೆ 5; 17ಕ್ಕೆ ಸರಿಯಾಗಿ ಮಾನವ ಸರಪಳಿಯನ್ನು ರಚಿಸಿ ಹಿಂಸೆಯ ವಿರುದ್ಧ ಐಕ್ಯತೆಯನ್ನು ಪ್ರದರ್ಶಿಸಲಿದ್ದಾರೆ.
ವಿದ್ಯಾ ದಿನಕರ್, ಸಾಜಿದಾ ಮೂಮಿನ್, ಟೆರ್ರಿ ಪಾಯಸ್, ಸುಹಾಸಿನಿ ಬಬ್ಬುಕಟ್ಟೆ, ಮೆಹರ್ ಮುಂತಾದವರು ಸತ್ಯಾಗ್ರಹದ ನೇತೃತ್ವವನ್ನು ವಹಿಸಿದ್ದಾರೆ.












