ಉತ್ತರಪ್ರದೇಶ: ಊರವರಿಂದ ಮಕ್ಕಳನ್ನು ಬಂದಿಯಾಗಿಟ್ಟ ದುಷ್ಕರ್ಮಿಯ ಪತ್ನಿಯ ಹತ್ಯೆ

0
1070

ಸನ್ಮಾರ್ಗ ವಾರ್ತೆ

ಲಕ್ನೊ, ಜ. 31: ಉತ್ತರ ಪ್ರದೇಶದ ಫಾರೂಕಾಬಾದಿನಲ್ಲಿ ಮಕ್ಕಳನ್ನು ಬಂದಿಯಾಗಿಟ್ಟುಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯ ಪತ್ನಿಯನ್ನು ಊರವರು ಥಳಿಸಿ ಕೊಂದು ಹಾಕಿದ್ದಾರೆ. ಪರೋಲ್‍ನಲ್ಲಿ ಹೊರಬಂದಿದ್ದ ಕೊಲೆ ಆರೋಪಿ ಸುಭಾಶ್ ಬದ್ದ ಎಂಬಾತ ಕಳೆದ ದಿವಸ 23 ಮಕ್ಕಳನ್ನು, ಮಹಿಳೆಯನ್ನು ಬಂದಿಯಾಗಿಸಿದ್ದ. ಮನೆಗೆ ಸುತ್ತುವರಿದ ಪೊಲೀಸರು ಹತ್ತು ಗಂಟೆಗಳ ಬಳಿಕ ಈತನನ್ನು ಕೊಂದು ಬಂದಿಯಾಗಿಟ್ಟಿದ್ದವರನ್ನು ಬಿಡುಗಡೆಗೊಳಿಸಿದರು. ಪೊಲೀಸ್ ಕಾರ್ಯಾಚರಣೆ ಕೊನೆಗೊಂಡ ಬಳಿಕ ದುಷ್ಕರ್ಮಿಯ ಪತ್ನಿಯನ್ನು ಊರವರು ಸೇರಿ ಕ್ರೂರವಾಗಿ ಹೊಡೆದರು. ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅಕೆ ಮೃತಪಟ್ಟಿದ್ದರು. ದುಷ್ಕರ್ಮಿ ಮಕ್ಕಳನ್ನು ಬಂದಿಯಾಗಿಸಿದ್ದರಲ್ಲಿ ಪತ್ನಿಯೂ ಶಾಮೀಲಾಗಿದ್ದಾಳೆಂದು ಜನರು ಮಹಿಳೆಯನ್ನು ಹೊರಗೆಳೆದು ಹೊಡೆದಿದ್ದಾರೆ. ಕಲ್ಲೇಟು, ಪೆಟ್ಟುಗಳಿಂದ ಮಹಿಳೆ ಗಂಭೀರ ಗಾಯಗೊಂಡ ಬಳಿಕ ಪೊಲೀಸರು ಬಂದು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಮೃತದೇಹ ಪೋಸ್ಟ್‍ಮಾರ್ಟಂ ನಡೆಸಿದ ಬಳಿಕ ಸಾವಿನ ಕಾರಣ ಸ್ಪಷ್ಟವಾಗಿ ತಿಳಿಯಬಹುದಾಗಿದೆ ಎಂದು ಕಾನ್‍ಪುರ ರೇಂಜ್ ಐಜಿ ಮೊಹಿತ್ ಅಗರ್‍ವಾಲ್ ತಿಳಿಸಿದರು.

ಕೊಲೆ ಪ್ರಕರಣದವೊಂದರಲ್ಲಿ ಜೀವಾವಧಿ ಶಿಕ್ಷೆಗೊಳಾಗದ ಸುಭಾಶ್ ಬದ್ಧ ಇತ್ತೀಚೆಗೆ ಪರೋಲಿನಿಂದ ಹೊರಬಂದಿದ್ದ. ಕಳೆದ ದಿವಸ ಪುತ್ರಿಯ ಪ್ರಥಮ ಹುಟ್ಟುಹಬ್ಬ ಆಚರಿಸಲು ಮಕ್ಕಳನ್ನು ಈತ ಮನೆಗೆ ಕರೆದಿದ್ದ. ಬಂದೂಕು ಸೇರಿಸಿ ಇವರನ್ನು ಬಂದಿಯಾಗಿಸಿದ್ದ. ಬದ್ದರ ಪತ್ನಿ ಮತ್ತು ಒಂದು ವರ್ಷದ ಪುತ್ರಿಯನ್ನೂ ಬಂದಿಯಾಗಿರಿಸಿದ್ದನೆನ್ನಲಾಗಿದೆ. ಜನ್ಮದಿನಾಚರಣೆಯ ಬಳಿಕ ಮಕ್ಕಳು ಮರಳದ್ದರಿಂದ ನೆರೆಮೆಯವರು ಮನೆಯ ಬಾಗಿಲು ಬಡಿದಾಗ ಬದ್ದ ಮಕ್ಕಳನ್ನು ಬಂದಿಯಾಗಿಸಿದ ಘಟನೆ ಅರಿವಿಗೆ ಬಂದಿತ್ತು. ಬಂದೂಕು, ಗ್ರೆನೆಡ್ ಸಹಿತ ಆಯುಧಗಳೊಂದಿಗೆ ದುಷ್ಕರ್ಮಿ ಹಿಂಸಾಚಾರಕ್ಕೆ ಯತ್ನಿಸಿದ್ದನೆಂದು ಪೊಲೀಸರು ತಿಳಿಸಿದರು. ಆರೋಪಿಯನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಪೊಲೀಸರ ಮಾತನ್ನು ಆತ ಕೇಳಲಿಲ್ಲ. ಮನೆಯ ಮುಂದೆ ಸೇರಿದವರ ಮೇಲೆ ಬದ್ದ ಬಂದೂಕು ಗುರಿ ಹಿಡಿದಿದ್ದ. ಗುಂಡು ಹಾರಾಟದಲ್ಲಿ ಮೂವರು ಪೊಲೀಸರಿಗೂ, ಒಬ್ಬ ಸ್ಥಳೀಯ ಗ್ರಾಮೀಣನಿಗೂ ಗಾಯಗಳಾಗಿವೆ. ನಂತರ ಮಕ್ಕಳನ್ನು ಬಿಡುಗಡೆಗೊಳಿಸಿಲು ಪೊಲೀಸರು ಮನೆಯನ್ನು ಸುತ್ತುವರಿದು ಕಾರ್ಯಾಚರಣೆ ಆರಂಭಿಸಿದ್ದರು. ಸುಭಾಶ್ ಬದ್ದ ಈ ವೇಳೆ ಗುಂಡಿಗೆ ಆಹುತಿಯಾಗಿದ್ದಾನೆ.

ಭಯೋತ್ಪಾದನಾ ವಿರೋಧಿ ದಳ ಮತ್ತು ಉತ್ತರಪ್ರದೇಶ ಪೊಲೀಸರು ಸೇರಿ ಕಾರ್ಯಾಚರಣೆ ನಡೆಸಿದರು. ಬಂದಿಗಳನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲಾಗಿದೆ. ಬದ್ದನ ಮೃತದೇಹ ತೆರವುಗೊಳಿಸಿ ಬಳಿಕ ಬದ್ದನ ಪತ್ನಿಗೆ ಊರವರು ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.