ಹೊಸದಿಲ್ಲಿ: ಸರ್ವಪಕ್ಷ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಮಿತ್ರ ಪಕ್ಷಗಳಿಂದಲೇ ಆಕ್ಷೇಪ; ನಿಮ್ಮನ್ನು ನಂಬಿ ಕೆಟ್ಟೆವು ಎಂದು ತರಾಟೆ

0
15925

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 31: ಪಾರ್ಲಿಮೆಂಟಿನ ಬಜೆಟ್ ಅಧಿವೇಶನ ಶಾಂತಿಯುತವಾಗಿ ನಡೆಸಲು ಸರಕಾರ ಕರೆದ ಸರ್ವಪಕ್ಷ ಸಭೆಯಲ್ಲಿ ಪೌರತ್ವ ವಿಷಯದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಪಕ್ಷಗಳಲ್ಲದೆ, ಪೌರತ್ವ ತಿದ್ದುಪಡಿ ಕಾನೂನನ್ನು ಬೆಂಬಲಿಸಿ ಪಾರ್ಲಿಮೆಂಟಿನಲ್ಲಿ ಮತದಾನ ಮಾಡಿದ ಬಿಜು ಜನತಾದಳ, ವೈಎಸ್ಸಾರ್ ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ ಕೂಡ ಸರಕಾರವು ಪೌರತ್ವ ವಿಷಯವನ್ನು ನಿರ್ವಹಿಸುವ ರೀತಿಗೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿತು. ಪೌರತ್ವ ತಿದ್ದುಪಡಿ ಕಾನೂನಿಂದ ಯಾರಿಗೂ ತೊಂದರೆ ಇಲ್ಲ ಎಂಬ ವಿವರಣೆಗಳನ್ನು ನಂಬಿ ನಾವು ಅದನ್ನು ಬೆಂಬಲಿಸಿದ್ದೇವೆಂದು ಬಿಜೆಡಿ, ವೈಎಸ್ಸಾರ್ ಕಾಂಗ್ರೆಸ್ ಪ್ರತಿನಿಧಿಗಳು ಹೇಳಿದರು. ಆದರೆ ದೇಶದ ಎನ್ ಆರ್ ಸಿ ಜಾರಿಯ ಪೂರ್ವ ತಯಾರಿ ಇದು ಎಂದು ಬಿಜೆಪಿಯ ಉನ್ನತ ಸಚಿವರು ಭಾಷಣ ಮಾಡುತ್ತಾ ತಿರುಗಾಡಿದರು. ಸಾಮೂಹಿಕ ಜವಾಬ್ದಾರಿಯನ್ನು ಮರೆತು ಕೇಂದ್ರ ಸರಕಾರ ಮಾತಾಡುತ್ತಿದೆ. ಇಂತಹ ಹೇಳಿಕೆಗಳು ದೇಶದಲ್ಲಿ ದೊಡ್ಡ ಆತಂಕವನ್ನು ಸೃಷ್ಟಿಸಿದೆ ಎಂದು ಬಿಜೆಡಿ ಪ್ರತಿನಿಧಿ ಪಿನಾಕಿ ಮಿಶ್ರಾ ರೋಪಿಸಿದರು. ಆಂಧ್ರ ಪ್ರದೇಶದಲ್ಲಿ ಯಾವ ಕಾರಣಕ್ಕೂ ಕಾನೂನು ಜಾರಿ ಮಾಡುವುದಿಲ್ಲ ಎಂದು ವೈಎಸ್ಸಾರ್ ಕಾಂಗ್ರೆಸ್ ಸರ್ವ ಪಕ್ಷ ಸಭೆಯಲ್ಲಿ ತಿಳಿಸಿತು. ಕೇಂದ್ರ ಸರಕಾರವನ್ನು ಬೆಂಬಲಿಸುವ ಪಿ ಎ ಸಂಗ್ಮಾರ ಪುತ್ರಿ ಅಗತಾ ಸಂಗ್ಮಾ ಸರಕಾರವನ್ನು ಕಟುವಾಗಿ ಟೀಕಿಸಿದರು.

ತೆಲಂಗಾಣ ರಾಷ್ಟ್ರಸಮಿತಿ ಪ್ರತಿನಿಧಿಗಳು ಈ ಕಾನೂನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ದೊಡ್ಡ ಜನವಿಭಾಗವನ್ನು ಸಾರ್ವಜನಿಕ ಸಮೂಹದಿಂದ ಮೂಲೆಗುಂಪು ಮಾಡಲು ಇದು ದಾರಿ ಮಾಡಿಕೊಡುತ್ತಿದೆ ಎಂದು ಟಿಆರ್‍ಎಸ್ ಬೆಟ್ಟು ಮಾಡಿತು. ತಪ್ಪುಕಲ್ಪನೆ ನಿವಾರಿಸುವ ಕುರಿತು ನಿವಾರಣೆಯ ತ್ವರಿತ ಕ್ರಮ ನಡೆಯಬೇಕೆಂದು ಕೇಂದ್ರ ಸಚಿವ ರಾಮದಾಸ ಅಠಾಳೆ ಸಭೆಯಲ್ಲಿ ಹೇಳಿದರು. ಪ್ರತಿಭಟನೆಯಲ್ಲಿ ಭಾಗವಹಿಸುವವರು ಮನೆಗೆ ನುಗ್ಗಿ ಮಕ್ಕಳನ್ನೂ ಸಹೋದರಿಯರನ್ನೂ ಅತ್ಯಾಚಾರ ಮಾಡುವರೆಂಬ ಬಿಜೆಪಿ ಸಂಸದನ ಹೇಳಿಕೆಯನ್ನು ಎನ್‍ಸಿಪಿಯ ಸುಪ್ರಿಯಾ ಸುಳೆ ಪ್ರಸ್ತಾಪಿಸಿದರು.

ಪೌರತ್ವ ಪಟ್ಟಿಯನ್ನು ಬೆಂಬಲಿಸಿ ಒಬ್ಬನೂ ಸಭೆಯಲ್ಲಿ ಮಾತಾಡಲಿಲ್ಲ. ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ದೇಶ ಎದುರಿಸುತ್ತಿರುವ ಸಮಸ್ಯೆಯನ್ನು ಬೆಟ್ಟು ಮಾಡಿದಾಗ . ಐದು ನಿಮಿಷ ಮಾತಾಡಿದ ಪ್ರಧಾನಿ ಒಂದಕ್ಷರವನ್ನೂ ಈ ಕುರಿತು ಹೇಳಲಿಲ್ಲ ಎಂದು ಸಂಸದ ಎನ್‍ ಕೆ ಪ್ರೇಮಚಂದ್ರನ್ ಆರೋಪಿಸಿದರು. ಪಾರ್ಲಿಮೆಂಟಿನ ಎರಡು ಸದನಗಳಲ್ಲಿಯೂ ತೀವ್ರ ಪ್ರತಿಭಟನೆ ನಡೆಯುವ ಸೂಚನೆ ದೊರಕಿದೆ.