ಸಿಎಎ ವಿರುದ್ಧ ನಾಟಕ: ಶಾಹೀನ್ ವಿದ್ಯಾರ್ಥಿಯ ತಾಯಿ, ಮುಖ್ಯ ಅಧ್ಯಾಪಕಿಯ ಬಂಧನ

0
788

ಸನ್ಮಾರ್ಗ ವಾರ್ತೆ

ಬೀದರ್, ಫೆ. 1: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಬೀದರಿನ ಶಾಲೆಯಲ್ಲಿ ನಾಟಕ ಮಾಡಿದ್ದಕ್ಕೆ ಸಂಬಂಧಿಸಿ ದೇಶದ್ರೋಹ ಆರೋಪದಡಿಯಲ್ಲಿ ಪ್ರಧಾನ ಅಧ್ಯಾಪಿಕೆ ಮತ್ತು ವಿದ್ಯಾರ್ಥಿಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೀದರಿನ ಶಾಹಿನ್ ಉರ್ದು ಮೀಡಿಯಂ ಶಾಲೆಯ ಪ್ರಧಾನ ಅಧ್ಯಾಪಕಿ ಫರೀದಾ ಬೇಗಂ(52), ಐದನೆ ತರಗತಿ ವಿದ್ಯಾರ್ಥಿಯ ತಾಯಿ ನವೀದಾ (26)ರನ್ನು ಬಂಧಿಸಲಾಗಿದೆ. ಇವರನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ.

ಬೀದರಿನ ಶಾಹಿನ್ ಎಜುಕೇಶನ್ ಇನ್ಟಿಟಿಟ್ಯೂಟ್‍ನಲ್ಲಿ ನಡೆದ ಮಕ್ಕಳ ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ವ್ಯಂಗ್ಯ ಮಾಡಲಾಗಿದೆ ಎಂದು ಎಬಿವಿಪಿ ಕಾರ್ಯಕರ್ತ ನಿಲೇಶ್ ರಕ್ಶಾಲ್ ಎಂಬವರ ದೂರಿನ ಮೇರೆಗೆ ಕೇಸು ದಾಖಲಿಸಿಕೊಳ್ಳಲಾಗಿತ್ತು. ಶಾಲೆಯ ನಾಲ್ಕನೆ, ಐದನೆ, ಆರನೆ ತರಗತಿಯ ವಿದ್ಯಾರ್ಥಿಗಳು ನಾಟಕದಲ್ಲಿ ಭಾಗವಹಿಸಿದ್ದರು.