ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 6: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಮಹಿಳೆಯರ ಆಹೋರಾತ್ರೆ ಹೋರಾಟ ನಡೆಯುತ್ತಿರುವ ಶಾಹೀನ್ ಬಾಗ್ನಲ್ಲಿ ಪಂಜಾಬಿನ ರೈತರ ತಂಡ ಲಂಗರ್ ಗುರುದ್ವಾರಗಳಲ್ಲಿ ಉಚಿತ ಆಹಾರ ನೀಡುವ ವ್ಯವಸ್ಥೆ ಮಾಡಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ಬ್ಯಾಂಕ್ ಮಹಿಳೆಯರ ಸಹಿತ 500ಕ್ಕೂ ಹೆಚ್ಚು ರೈತರು ಪಂಜಾಬ್ ನಿಂದ ಶಾಹಿನ್ ಬಾಗ್ ಗೆ ಬಂದು ಹೋರಾಟಗಾರರಿಗೆ ಊಟ ನೀಡುವ ಕಮ್ಯುನಿಟಿ ಕಿಚನ್ ವ್ಯವಸ್ಥೆ ಆರಂಭಿಸಿದ್ದಾರೆ. ಮಂಗಳವಾರ ಸಂಜೆ ಒಂಬತ್ತು ಬಸ್ಗಳಲ್ಲಿ ರೈತರು ಶಾಹಿನ್ ಬಾಗ್ಗೆ ಬಂದಿದ್ದರೂ ದಿಲ್ಲಿಗೆ ಬರುವ ಅನುಮತಿಯನ್ನು ಪೊಲೀಸರು ನೀಡಿರಲಿಲ್ಲ. ಪೊಲೀಸರು ಇವರನ್ನು ಬಂಧಿಸಿ ದಿಲ್ಲಿಯ ವಿವಿಧ ಗುರುದ್ವಾರಗಳಿಗೆ ಕರೆದುಕೊಂಡು ಹೋದರು. ಒಂದು ರಾತ್ರೆಯಿಡೀ ಅಲ್ಲಿ ತಡೆದು ನಿಲ್ಲಿಸಿದ್ದರು. ಮರಳಿ ಹೋಗುವುದಿಲ್ಲ ಎಂಬ ನಿಲುವಿನಲ್ಲಿ ಗಟ್ಟಿ ನಿಂತದ್ದರಿಂದ ಪೊಲೀಸರು ಅವರನ್ನು ಬಿಟ್ಟು ಕಳಿಸಿದ್ದಾರೆ.
ಬುಧವಾರ ಬೆಳಗ್ಗೆ ಇವರು ಶಾಹೀನ್ ಬಾಗ್ಗೆ ಬಂದು ಲಂಗರು ಆರಂಭಿಸಿದ್ದಾರೆ. ಪಂಜಾಬಿನ ಸಂಗೂರಿನಿಂದ ಒಂದು ತಂಡ ಒಂದು ರಾತ್ರೆಯಿಡೀ ಸಂಚರಿಸಿ ದಿಲ್ಲಿಗೆ ಬಂದಿದೆ. ಫೆಬ್ರವರಿ ಎಂಟರವರೆಗೆ ಶಾಹೀನ್ ಬಾಗ್ನಲ್ಲಿರುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ಹರೀಂದರ್ ಬಿಂದು ಹೇಳಿದರು. ಇವರಿಗೆ ಆಹಾರ ತಯಾರಿಸುವ ತರಕಾರಿ, ಗೋಧಿ ಹಿಟ್ಟು , ಎಣ್ಣೆ ಇತ್ಯಾದಿ ವಸ್ತುಗಳನ್ನು ಪ್ರದೇಶದ ನಿವಾಸಿಗಳು ಮುಂತಾದವರು ತಂದು ಕೊಟ್ಟಿದ್ದಾರೆ.
ಪಂಜಾಬ್ ರೈತ ಸಂಘ ಕಳೆದ ತಿಂಗಳೂ ಶಾಹಿನ್ಬಾಗ್ಗೆ ಬಂದು ಆಹಾರ ಮಾಡಿಕೊಟ್ಟಿದ್ದರು. ಅಲ್ಲದೆ, ಪಂಜಾಬ್ನಿಂದ ಹರಿಯಾಣದ ಹಲವು ತಂಡಗಳು ವಿವಿಧ ದಿನಗಳಲ್ಲಿ ಉಚಿತ ಆಹಾರ ವಿತರಣೆ ನಡೆಸುತ್ತಿದೆ.












