ಆದಾಯ ತೆರಿಗೆ ಇಲಾಖೆಯಿಂದ ತಪಾಸಣೆ: ನಟ ವಿಜಯ್‍ ವಿಚಾರಣೆಯಲ್ಲಿ

0
625

ಸನ್ಮಾರ್ಗ ವಾರ್ತೆ

ಚೆನ್ನೈ, ಫೆ. 6: ಆದಾಯ ತೆರಿಗೆ ಇಲಾಖೆ ಚೆನ್ನೈಯಲ್ಲಿ ನಡೆಸಿದ ತಪಾಸಣೆಯಲ್ಲಿ 65 ಕೋಟಿ ರೂಪಾಯಿ ವಶಪಡಿಸಿಕೊಂಡಿದೆ. ತಮಿಳ್ ಸಿನೆಮಾ ನಿರ್ಮಾಪಕರಿಗೆ ಸಾಲ ಕೊಡುವ ಅಂಬು ಚೆಯಿಯನ್‍ರ ಚೆನ್ನೈ, ಮಧುರೆಯ ಕೇಂದ್ರಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಹಣ ವಶಪಡಿಸಿಕೊಳ್ಳಲಾಗಿದೆ. ಚೆನ್ನೈಯಿಂದ 50ಕೋಟಿ, ಮಧುರೆಯಿಂದ 15ಕೋಟಿ ರೂಪಾಯಿ ಪತ್ತೆಯಾಗಿದೆ.

ವಿಜಯ್ ನಾಯಕನಾದ ಬಿಗಿಲ್‍ನ ನಿರ್ಮಾಪಕರು ಎ ಜಿ ಎಸ್ ಸಿನೆಮಾಸ್‍ ಗೆ ಅಂಬು ಚೆಯಿಯಾನ್ ಸಾಲಕೊಟ್ಟಿದ್ದರು. ಈ ಸಿನೆಮಾದ ಸಂಭಾವನೆಗೆ ಸಂಬಂಧಿಸಿದ ಲೆಕ್ಕಗಳಲ್ಲಿ ವ್ಯತ್ಯಾಸ ಇದೆ ಎಂದು ಸೂಚಿಸಿ ಆದಾಯ ತೆರಿಗೆ ಇಲಾಖೆ ವಿಜಯ್‍ರನ್ನು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ದಿವಸ ಎಜಿಎಸ್ ಸಿನೆಮಾಸ್ ಕಚೇರಿಯಿಂದ 24 ಕೋಟಿ ರೂ. ವಶಪಡಿಸಿಕೊಳ್ಳಲಾಗಿತ್ತು.

ಇದೇ ವೇಳೆ, ಆದಾಯ ತೆರಿಗೆ ಇಲಾಖೆಯ ತಪಾಸಣೆ ಮುಂದುವರಿಯುತ್ತಿದೆ. ವಶಪಡಿಸಿಕೊಂಡಿರುವ ಹಣದ ಪ್ರಮಾಣ ಇನ್ನೂ ಹೆಚ್ಚು ಆಗಬಹುದೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.