ವಿಭಜನೆಯ ನಂತರ ಭಾರತದಲ್ಲಿ ಉಳಿದ ಮುಸ್ಲಿಮರು ದೇಶಕ್ಕೆ ಯಾವ ಪ್ರಯೋಜನವನ್ನೂ ಮಾಡಿಲ್ಲ- ಯೋಗಿ ಆದಿತ್ಯನಾಥ್

0
1640

ಸನ್ಮಾರ್ಗ ವಾರ್ತೆ

ದಿಲ್ಲಿ, ಫೆ. 7: ವಿಭಜನೆಯ ನಂತರ ಭಾರತದಲ್ಲಿ ಉಳಿದುಕೊಂಡ ಮುಸ್ಲಿಮರು ದೇಶಕ್ಕೆ ಯಾವುದೇ ಪ್ರಯೋಜನವನ್ನೂ ಮಾಡಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ದೇಶದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ ಅವರು ವಿಭಜನೆಯನ್ನು ವಿರೋಧಿಸಬೇಕಾಗಿತ್ತು. ಪಾಕಿಸ್ತಾನ ದೇಶದ ಹುಟ್ಟಿಗೆ ಕಾರಣವಿದು. ಒಂದು ವಿಶೇಷ ಸಮುದಾಯದ ಹೇಡಿಗಳಾದ ಜನರು ಮನೆಯಲ್ಲಿ ಕುಳಿತು ಮಹಿಳೆಯರನ್ನು ಮಕ್ಕಳನ್ನು ಪ್ರತಿಭಟನೆಗೆ ಹೊರಗೆ ಕಳುಹಿಸಿದ್ದಾರೆ. ಶಾಂತವಾಗಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಶಾಹಿನ್‍ಬಾಗ್‍ನ ಪ್ರತಿಭಟನೆ ಶಾಂತಿಯುತವಾಗಿಲ್ಲ. ಪ್ರದೇಶದಲ್ಲಿ ವಾಸಿಸುವವರಿಗೂ ಪ್ರಯಾಣಿಕರಿಗೂ ಕಷ್ಟ ಕೊಡುತ್ತಿದ್ದಾರೆ. ಶಾಹಿನ್ ಬಾಗ್‍ನಲ್ಲಿ ಪ್ರತಿಭಟಿಸುವ ನೂರಾರು ಮಹಿಳೆಯರು ಮಕ್ಕಳಿಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿರಿಯಾನಿ ಬಡಿಸುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಸಂದರ್ಶನದಲ್ಲಿ ಹೇಳಿದ್ದಾರೆ.