ಅಮೆರಿಕ ಪ್ರಜೆ ಚೀನದಲ್ಲಿ ಕೋರನಾದಿಂದ ಸಾವು

0
678

ಸನ್ಮಾರ್ಗ ವಾರ್ತೆ

ಬೀಜಿಂಗ್, ಫೆ. 8: ಅಮೆರಿಕದ ಪ್ರಜೆ ಚೀನದಲ್ಲಿ ಕೊರೊನಾ ವೈರಸ್‍ನಿಂದ ಮೃತಪಟ್ಟಿದ್ದಾನೆ. ಚೀನದ ಜಿನ್‍ ಯಯಿಂದನ್ ಆಸ್ಪತ್ರೆಯಲ್ಲಿ ಫೆಬ್ರುವರಿ ಆರರಂದು ಈ ಸಾವು ಸಂಭವಿಸಿದೆ. ಅಮೆರಿಕ ದೂತವಾಸದ ವಕ್ತಾರ ಶನಿವಾರ ಅಧಿಕೃತವಾಗಿ ಇದನ್ನು ಪ್ರಕಟಿಸಿದರು. ಚೀನದ ಕೊರೊನಾ ವೈರಸ್ ತೀವ್ರ ಹಾನಿಯುಂಟುಮಾಡಿದ್ದ ವುಹಾನದಲ್ಲಿ ಅಮೆರಿಕದ ಪ್ರಜೆ ವಾಸವಿದ್ದರು.

ಕೊರೊನಾ ವೈರಸ್ ಬಾಧಿಸಿ ಮೃತಪಟ್ಟ ಅಮೆರಿಕದ ಪ್ರಜೆಯ ಕುಟುಂಬದ ಶೋಕದಲ್ಲಿ ತಾನು ಭಾಗಿಯಾಗಿದ್ದೇನೆ ಎಂದು ದೂತವಾಸ ವಕ್ತಾರ ತಿಳಿಸಿದರು. ಕುಟುಂಬದ ಖಾಸಗಿತ್ವವನ್ನು ಪರಿಗಣಿಸಿ ಇತರ ವಿವರಗಳನ್ನು ಹೊರಬಿಟ್ಟಿಲ್ಲವೆಂದು ಅವರು ಹೇಳಿದರು.

ಗುರುವಾರ ಮಧ್ಯಾಹ್ನವರೆಗೆ ಇತರ ದೇಶಗಳ ಹತ್ತೊಂಬತ್ತು ಮಂದಿಗೆ ಚೀನದಲ್ಲಿ ಕೊರೊನಾ ವೈರಸ್ ತಗಲಿದೆ. ಇದರಲ್ಲಿ ಇಬ್ಬರು ರೋಗಗುಣಮುಖವಾಗಿ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಹದಿನೇಳು ಮಂದಿ ಇನ್ನೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.