ಸನ್ಮಾರ್ಗ ವಾರ್ತೆ
ಗುವಾಹಟಿ, ಫೆ. 10: ಅಸ್ಸಾಂನ ಸ್ಥಳೀಯ ಮುಸ್ಲಿಮರನ್ನು ಗುರುತಿಸುವುದಕ್ಕಾಗಿ ಸಮೀಕ್ಷೆ ನಡೆಸಲು ಅಸ್ಸಾಂ ಬಿಜೆಪಿ ಸರಕಾರ ಮುಂದಾಗಿದೆ. ಮಾರ್ಚ್ ತಿಂಗಳಲ್ಲಿ ಸಾಮಾಜಿಕ -ಆರ್ಥಿಕ ಸರ್ವೆ ನಡೆಸಲಿದೆ. ಹಳೆಯ ಪೂರ್ವ ಬಂಗಾಳದಿಂದ, ದಕ್ಷಿಣ ಪಾಕಿಸ್ತಾನದಿಂದ ಮತ್ತು ಬಾಂಗ್ಲಾದೇಶದಿಂದ ಬಂದ ಸ್ಥಳೀಯ ಮುಸ್ಲಿಮರನ್ನು ಪ್ರತ್ಯೇಕಿಸುವ ಗುರಿಯೊಂದಿಗೆ ಸಮೀಕ್ಷೆಯನ್ನು ಸರಕಾರ ನಡೆಸುತ್ತಿದೆ ಎಂದು ಅಲ್ಪಸಂಖ್ಯಾತ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮುಮಿನುಲ್ ಅವ್ವಾಮ್ ಹೇಳಿದರು. ಸ್ಥಳೀಯ ಮುಸ್ಲಿಮರು ಮತ್ತು ಬಾಂಗ್ಲಾದೇಶಿ ಮುಸ್ಲಿಮರ ಹೆಸರು ಸಮಾನ ರೀತಿಯಲ್ಲಿವೆ. ಇದರ ಫಲವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುವಾಗ ಗುರುತಿಸಲು ಸರಕಾರಕ್ಕೆ ಕಷ್ಟವಾಗುತ್ತಿದೆ. ಸ್ಥಳೀಯ ಮುಸ್ಲಿಮರ ಅಭಿವೃದ್ಧಿ ಈ ಸಮೀಕ್ಷೆಯಿಂದ ಹೆಚ್ಚು ಸಾಧ್ಯವಿದೆ ಎಂದು ಅವರು ಹೇಳಿದರು.
ಸರಕಾರ ಸ್ಥಳೀಯ ಗೊರಿಯ, ಮೊರಿಯ, ದೇಶಿ, ಜೊಲ್ಹ ಗೋತ್ರಗಳಲ್ಲಿ ಮುಖ್ಯವಾಗಿ ಸಮೀಕ್ಷೆಯನ್ನು ಜಾರಿಗೆ ತರುತ್ತಿದೆ. ಸೆನ್ಸಸ್ ನ ಸಿದ್ಧತೆ ಅಂತಿಮ ಹಂತದಲ್ಲಿದೆ. ಈ ಆರ್ಥಿಕ ವರ್ಷದಲ್ಲಿ ಅದನ್ನು ಜಾರಿಗೊಳಿಸಲು ಸಾದ್ಯವಾಗಬಹುದು ಎಂದು ಅವ್ವಾಮ್ ಹೇಳಿದರು.












