ಸನ್ಮಾರ್ಗ ವಾರ್ತೆ
ಗುರುವಾಯೂರು, ಫೆ. 10: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ನಿಲುವು ಕೈಗೊಂಡ ಪತ್ರಕರ್ತ ಮತ್ತು ಬಿಜೆಪಿ ಸಮರ್ಥಕ ರಾಹುಲ್ ಈಶ್ವರ್ ರನ್ನು ಪದಾಧಿಕಾರದಿಂದ ಅಮಾನತುಗೊಳಿಸಲಾಗಿದೆ ಎಂದು ಅಯ್ಯಪ್ಪ ಧರ್ಮ ಶೇನಾ ಟ್ರಸ್ಟ್ ಬೋರ್ಡ್ ತಿಳಿಸಿದೆ.
ರಾಹುಲ್ ಈಶ್ವರ್ ವಿರುದ್ಧ ಅಡ್ವೊಕೇಟ್ ಮನೊರಂಜನ್ ರ ನೇತೃತ್ವದಲ್ಲಿ ತನಿಖಾಸಮಿತಿಯನ್ನು ನೇಮಕಗೊಳಿಸಲಾಗಿದೆ. ಸಭೆಯಲ್ಲಿ ಸ್ವಾಮಿ ಹರಿನಾರಾಯಣನ್ ಅಧ್ಯಕ್ಷತೆ ವಹಿಸಿದ್ದರು. ಎ. ಪ್ರೇಮ್ಕುಮಾರ್, ಚೈತನ್ಯ ಚಕ್ರವರ್ತಿ, ಪಾರ್ವತಿ ಶೆಲ್ಲಿ, ಸೂರ್ಯಗಿರಿ ಸಭೆಯಲ್ಲಿ ಮಾತಾಡಿದರು.












