ಉಮರ್ ಅಬ್ದುಲ್ಲ’ ಜನರಲ್ಲಿ ಪ್ರಭಾವ ಬೀರುತ್ತಿದ್ದಾರೆ; ಮೆಹಬೂಬ ಮುಫ್ತಿ ಭಯೋತ್ಪಾದಕರನ್ನು ಹೊಗಳಿದ್ದಾರೆ- ಕೇಂದ್ರದ ಸಮರ್ಥನೆ

0
560

ಸನ್ಮಾರ್ಗ ವಾರ್ತೆ

ಶ್ರೀನಗರ, ಫೆ. 10: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲರ ವಿರುದ್ಧ ಸಾರ್ವಜನಿಕ ಸುರಕ್ಷಾ ಕಾನೂನಿನನ್ವಯ ಕೇಂದ್ರ ಸರಕಾರ ಬಂಧಿಸದ್ದು ಅವರು ಜನರ ಮೇಲೆ ಪ್ರಭಾವ ಬೀರುತ್ತಾರೆ ಎಂದು ಸೂಚಿಸಿದೆ. ಅವರು ಸರಕಾರದ ವಿರುದ್ಧ ಜನರನ್ನು ಪ್ರಚೋದಿಸಬಹುದು ಎಂದು ಪೊಲೀಸ್ ವರದಿಯಲ್ಲಿ ಆರೋಪಿಸಲಾಗಿದೆ. ಉಮರ್ ಅಬ್ದುಲ್ಲರ ಗೃಹಬಂಧನವನ್ನು ಮೂರು ತಿಂಗಳು ಹೆಚ್ಚಿಸಿರುವುದಕ್ಕೆ ಕಾರಣವಾಗಿ ಪೊಲೀಸರು ವರದಿಯಲ್ಲಿ ಇದನ್ನು ತಿಳಿಸಿದ್ದಾರೆ. ಭಯೋತ್ಪಾದಕರ ಸಾವಿನ ಬಳಿಕ ಅವರನ್ನು ಪ್ರಶಂಸಿಸಿದ ಆರೋಪವನ್ನು ಮೆಹಬೂಬ ಮುಫ್ತಿಯ ವಿರುದ್ಧ ಹೊರಿಸಲಾಗಿದೆ. ಈಗ ಉಮರ್ ಅಬ್ದುಲ್ಲರನ್ನು ಹರಿ ನಿವಾಸದಲ್ಲಿ ಮತ್ತು ಮೆಹಬೂಬ ಮುಫ್ತಿ ಶ್ರೀನಗರದ ಅತಿಥಿ ಮಂದಿರದಲ್ಲಿ ಗೃಹಬಂಧನದಲ್ಲಿರಿಸಲಾಗಿದೆ.

ಗೃಹಬಂಧನದಲ್ಲಿ ಆರು ತಿಂಗಳು ಪೂರ್ತಿಯಾಗಲು ಕೆಲವು ಗಂಟೆಗಳು ಇರುವಾಗ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ, ಉಮರ್ ಅಬ್ದುಲ್ಲ, ಮೆಹಬೂಬ ಮುಫ್ತಿ ವಿರುದ್ಧ ಸಾರ್ವಜನಿಕ ಸುರಕ್ಷಾ ಕಾನೂನು ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗಿದೆ. ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧಿಕಾರಿಗಳು ಹರಿನಿವಾಸಕ್ಕೆ ಹೋಗಿ ವಾರಂಟನ್ನು ಉಮರ್ ರಿಗೆ ನೀಡಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್ ಪ್ರಧಾನ ಕಾರ್ಯದರ್ಶಿ ಅಲಿ ಮುಹಮ್ಮದ್ ಸಾಗರ್, ಪಿಡಿಪಿ ನಾಯಕರಾದ ಸಾರ ಮದನಿ, ನಈಂ ಅಕ್ತರ್‍ವಿ ವಿರುದ್ಧವೂ ಕೇಸು ದಾಖಲಿಸಲಾಗಿದೆ. ಎಲ್ಲರೂ ಆಗಸ್ಟ್ ಐದರಿಂದ ಗೃಹಬಂಧನದಲ್ಲಿದ್ದಾರೆ.