ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 10: ಕೊನೆಗೂ ದಿಲ್ಲಿ ವಿಧಾನಸಭಾ ಮತದಾನದ ಶೇಕಡವಾರು ಲೆಕ್ಕವನ್ನು ಚುನಾವಣಾ ಆಯೋಗ ಹೊರಬಿಟ್ಟಿದೆ. ದಿಲ್ಲಿಯಲ್ಲಿ ಶೇ. 62.59 ಮತದಾನ ನಡೆದಿದೆ ಎಂದು ತಿಳಿಸಿದೆ. ಒಂದಕ್ಕೂ ಹೆಚ್ಚು ಬಾರಿ ಬ್ಯಾಲೆಟ್ ಪೇಪರ್ ಗಳ ಸೂಕ್ಷ್ಮ ಪರಿಶೀಲನೆ ಮಾಡಿದ್ದರಿಂದ ಮತದಾನದ ಶೇಕವಾಡುವಾರು ಲೆಕ್ಕ ತಿಳಿಸಲು ತಡವಾಗಿದೆ ಎಂದು ಚುನಾವಣಾ ಆಯೋಗ ವಿವರಿಸಿದೆ. ಇದಕ್ಕೆ ಸಂಬಂಧಿಸಿ ಆಮ್ ಆದ್ಮಿ ಪಾರ್ಟಿಯ ಆರೋಪ ನಿರಾಧಾರವೆಂದು ಚುನಾವಣಾ ಆಯೋಗ ಹೇಳಿದೆ. ಚುನಾವಣೆಯ ಮರುದಿವಸ ಮತದಾನದ ಶೇಕಡಾವಾರು ಲೆಕ್ಕವನ್ನು ಯಾಕೆ ಹೊರಬಿಡಲಾಗಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಚುನಾವಣಾ ಆಯೋಗದ ವಿರುದ್ಧ ರಂಗಪ್ರವೇಶಿಸಿದ್ದರು. ಇದರ ಬೆನ್ನಿಗೆ ಶೇಕಡಾವಾರು ಲೆಕ್ಕಗಳನ್ನು ಆಯೋಗ ಪ್ರಕಟಿಸಿದೆ.
2015ಕ್ಕಿಂತ ಈ ಐದು ಶೇ. ಕಡಿಮೆ ಮತದಾನವಾಗಿದೆ. 2015ರಲ್ಲಿ 67.5ರಷ್ಟು ಮತದಾನವಾಗಿತ್ತು. ಈ ಬಾರಿ ಲೋಕಸಭಾ ಚುನಾವಣೆಗಿಂತ ಶೇ. ಎರಡರಷ್ಟು ಹೆಚ್ಚು ವಿಧಾನಸಭಾ ಚುನಾವಣೆಯಲ್ಲಿ ಮತದಾನವಾಗಿದೆ. ಹೆಚ್ಚು ಮತದಾನ ಬಲ್ಲಿಮಾರಾನ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದು ಇಲ್ಲಿ ಶೇ. 71.6 ಮತದಾನವಾಗಿದೆ. ಅತ್ಯಂತ ಕಡಿಮೆ ದಿಲ್ಲಿ ಕಂಟೊನ್ಮೆಂಟ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನವಾಗಿದೆ. ಇಲ್ಲಿ ಶೇ. 45.6 ಮತದಾನವಾಗಿದೆ.
ಓಕ್ಲಾ ಶಾಹಿನ್ಬಾಗ್ನಲ್ಲಿ ಶೇ. 58.84 ಮತದಾನವಾಗಿದೆ. ಬಾಬರ್ ಪುರಿಯಲ್ಲಿ ಮತದಾನ ಯಂತ್ರದ ಗಡಿಬಿಡಿಯನ್ನು ಮುಂದಿಟ್ಟು ಆಮ್ ಆದ್ಮಿ ಪಾರ್ಟಿ ಆರೋಪವನ್ನು ಹೊರಿಸಿತ್ತು. ಕೂಡಲೇ ಈ ಕುರಿತು ತನಿಖೆ ನಡೆಸಲಾಯಿತು ಎಂದು ಚುನಾವಣಾ ಆಯೋಗ ತಿಳಿಸಿದೆ. ಆದರೆ ಅಲ್ಲಿ ಏನೂ ಎಡವಟ್ಟು ಕಂಡು ಬಂದಿಲ್ಲ. ಎರಡು ಮೀಸಲು ಯಂತ್ರಗಳನ್ನು ಅಲ್ಲಿಂದ ಪೊಲಿಂಗ್ ಅಧಿಕಾರಿಗೆ ಕೊಡಲಾಗಿತ್ತು. ಅದನ್ನು ಚುನಾವಣೆಯಲ್ಲಿ ಉಪಯೋಗಿಸಿರಲಿಲ್ಲ. ಅದನ್ನು ಕೊಂಡು ಹೋಗುವ ವ್ಯಕ್ತಿಯನ್ನು ಅಧಿಕಾರಿಗಳು ಸುತ್ತುವರಿದಿದ್ದರು. ಪೊಲೀಸರು ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ಘಟನೆಗಳು ಆಗುತ್ತಿರಲಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.












