ಬ್ಯಾರಿಕೇಡ್‌ಗಳನ್ನು ಸರಿಸಿ ಹಿಂದೂ ವ್ಯಕ್ತಿಯ ಶವ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟ ಶಾಹೀನ್ ಬಾಗ್ ಪ್ರತಿಭಟನಾಕಾರರು; ವೀಡಿಯೊ ವೈರಲ್

0
1715

ಸನ್ಮಾರ್ಗ ವಾರ್ತೆ

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ರಸ್ತೆ ತಡೆ ಮತ್ತು ಹತ್ತಿರದ ನಿವಾಸಿಗಳಿಗೆ ಅನಾನುಕೂಲತೆಯನ್ನುಂಟುಮಾಡುತ್ತಿದೆ ಎಂಬ ಹಲವಾರು ರಾಜಕಾರಣಿಗಳ ಆರೋಪದ ಮಧ್ಯೆ, ಭಾನುವಾರ ವಿಡಿಯೋವೊಂದು ವೈರಲ್ ಆಗಿದ್ದು, ಪ್ರತಿಭಟನಾಕಾರರು ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯ ಮೆರವಣಿಗೆ ಹಾದುಹೋಗಲಿಕ್ಕಾಗಿ ಬ್ಯಾರಿಕೇಡ್‌ಗಳನ್ನು ಸರಿಸಿ ಅನುವು ಮಾಡಿ ಕೊಟ್ಟಿದ್ದಾರೆ.

“ನಾವು ಒಬ್ಬರನ್ನೊಬ್ಬರು ಗೌರವಿಸುತ್ತೇವೆ ಮತ್ತು ಮೆರವಣಿಗೆಯನ್ನು ಹಾದುಹೋಗಲು ಅನುಮತಿಸುವ ಮೂಲಕ, ನಾವು ಅಸಾಮಾನ್ಯವಾದದ್ದೇನನ್ನೂ ಮಾಡಿಲ್ಲ. ನಾವು ಬಸ್ಸುಗಳು ಮತ್ತು ಆಂಬುಲೆನ್ಸ್‌ಗಳಿಗೆ ಸಹ ಹೀಗೆ ಹಾದುಹೋಗಲು ಅವಕಾಶ ಮಾಡಿಕೊಟ್ಟಿದ್ದೇವೆ ”ಎಂದು ಪ್ರತಿಭಟನಾಕಾರರು ಎಎನ್‌ಐಗೆ ತಿಳಿಸಿದರು. ನೂರಾರು ಮಹಿಳೆಯರು ಧರಣಿ ಆರಂಭಿಸಿದ ನಂತರ, ಡಿಸೆಂಬರ್ 15, 2019 ರಿಂದ ದೆಹಲಿಯ ಶಾಹೀನ್ ಬಾಗ್‌ ರಸ್ತೆಯನ್ನು ಕಳೆದ 50 ದಿನಗಳಿಗೂ ಹೆಚ್ಚು ಕಾಲ ಮುಚ್ಚಲಾಗಿದೆ.

ಇದಕ್ಕೂ ಮೊದಲು ಜನವರಿಯಲ್ಲಿ ಪ್ರತಿಭಟನಾಕಾರರು ಶಾಲಾ ವ್ಯಾನ್‌ಗಳಿಗೆ ಹಾದುಹೋಗಲು ಅವಕಾಶ ನೀಡಿದ್ದರು. ಹಾದುಹೋಗುವ ಶಾಲಾ ವ್ಯಾನ್‌ನ ವೀಡಿಯೊವನ್ನು ಹಂಚಿಕೊಳ್ಳುತ್ತಾ, ಶಾಹೀನ್ ಬಾಗ್ ಪ್ರತಿಭಟನಾಕಾರರ ಟ್ವಿಟರ್ ಹ್ಯಾಂಡಲ್ “ಪ್ರಿಯ ಡೆಲ್ಲಿ ಪೊಲೀಸ್, ನಮಗೂ ಮಕ್ಕಳಿದ್ದಾರೆ, ಮಕ್ಕಳ ಶಾಲಾ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಪೋಷಕರ ಚಿಂತೆಗಳನ್ನು ಅರ್ಥಮಾಡಿಕೊಳ್ಳಿ. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿವಿಯಲ್ಲಿ ನಡೆದ ಅನ್ಯಾಯದ ಗಾಯಗಳಿಂದ ನಮ್ಮ ಅನೇಕ ಮಕ್ಕಳು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಶಾಲೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಶಾಲಾ ವ್ಯಾನ್‌ಗಳನ್ನು ದಾಟಲು ಅವಕಾಶ ನೀಡುತ್ತಿದ್ದೇವೆ” ಎಂದು ಹೇಳಲಾಗಿತ್ತು.