ಮುನವ್ವರ್ ರ ಪುತ್ರಿಗೆ ಪಾಕಿಸ್ತಾನಕ್ಕೆ ಹೋಗಲು ಹೇಳಿದ ಬಿಜೆಪಿ

0
1183

ಸನ್ಮಾರ್ಗ ವಾರ್ತೆ

ಅಲಿಗಡ, ಫೆ. 11: ಭಾರತದ ಈಗಿನ ವಾತಾವರಣದಲ್ಲಿ ಉಸಿರುಗಟ್ಟುತ್ತಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಪ್ರಮುಖ ಉರ್ದು ಕವಿ ಮುನವ್ವರ್ ರಾಣಾರ ಮಗಳು ಸುಮಯ್ಯಾ ರಾಣಾರಿಗೆ ಬಿಜೆಪಿ ಸಂಸದ ಸತೀಶ್ ಗೌತಂ ಹೇಳಿದ್ದಾರೆ. ಸುಮಯ್ಯಾ ಸಾಮಾಜಿಕ ಕಾರ್ಯಕರ್ತೆ ಕೂಡ ಆಗಿದ್ದಾರೆ. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಹೋರಾಟಗಳನ್ನು ಉತ್ತರ ಪ್ರದೇಶ ಸರಕಾರದ ಪೊಲೀಸರು ದಮನಿಸುತ್ತಿದ್ದಾರೆ. ಇಂತಹ ಕ್ರಮಗಳು ಜನರನ್ನು ಉಸಿರುಗಟ್ಟಿಸುವಂತೆ ಮಾಡುತ್ತಿದೆ ಎಂದು ಕಳೆದ ದಿವಸ ಸುಮಯ್ಯಾ ರಾಣಾ ಹೇಳಿದ್ದರು.

ಇದಾದ ಬಳಿಕ ಅಲಿಗಡ ಸಂಸದ ಬಿಜೆಪಿಯ ಸತೀಶ್ ಗೌತಮ್ ಅಲಿಗಡ ಮುಸ್ಲಿಂ ಯುನಿವರ್ಸಿಟಿಯನ್ನು ಪ್ರತಿನಿಧಿಸುವವರ ವಿರುದ್ಧ ಮುಂದೆಯೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಸುಮೆಯ್ಯಾರಿಗೆ ಪಾಕಿಸ್ತಾನಕ್ಕೂ ಹೋಗಬಹುದು. ಹೆಚ್ಚಿನ ವಿದ್ಯಾರ್ಥಿಗಳು ತರಗತಿಗೆ ಹೋಗಿದ್ದರೆ, 150 ವಿದ್ಯಾರ್ಥಿಗಳು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಇವರನ್ನುಪೊಲೀಸರು ಗುರುತಿಸಿದ್ದಾರೆ. ಮುಂದಿನ ವರ್ಷದಿಂದ ಅವರು ಕ್ಯಾಂಪಸ್‍ನಲ್ಲಿರಲಾರರು .

ಇದೇ ವೇಳೆ ಅಧಿಕಾರಿಗಳ ಬೆದರಿಕೆಯಿದ್ದರೂ ಸುಮಯ್ಯ ಅಲಿಗಡ ಈದ್‍ಗಾಹದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.