ಸಿಎಎ ವಿರುದ್ಧ ಪ್ರತಿಭಟನೆ: ಡಾ. ಕಪಿಲ್ ಖಾನ್ ಗೆ ಜಾಮೀನು

0
594

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 11: ಉತ್ತರಪ್ರದೇಶ ಪೊಲೀಸರು ಮುಂಬೈಯಿಂದ ಬಂಧಿಸಿ ಕರೆತಂದಿದ್ದ ಡಾ.ಕಫಿಲ್ ಖಾನ್‍ ಗೆ ಜಾಮೀನು ಸಿಕ್ಕಿದೆ. ಕಫಿಲ್ ಖಾನ್‍ರಿಗೆ ಅಲಿಗಡ ಸಿಜೆಎಂ ಕೋರ್ಟು ಜಾಮೀನು ನೀಡಿದ್ದು ಜನವರಿ 29 ಬುಧವಾರದಂಡು ಕಫಿಲ್ ಖಾನ್‍ರನ್ನು ಮುಂಬೈಯಿಂದ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.

ಕಳೆದ ತಿಂಗಳು ಅಲಿಗಡ ಮುಸ್ಲಿಂ ಯುನಿವರ್ಸಿಟಿಯಲ್ಲಿ ಅವರು ಮಾಡಿದ ಭಾಷಣದ ನೆಪದಲ್ಲಿ ಅವರನ್ನು ಬಂಧಿಸಲಾಗಿತ್ತು. ಮುಂಬೈಯ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಅವರು ಕೇರಳಕ್ಕೆ ಹೊರಟಿದ್ದರು. ಈ ವೇಳೆ ಅವರನ್ನು ಬಂಧಿಸಲಾಗಿತ್ತು.