ಅತ್ಯಾಚಾರಕ್ಕೊಳಗಾದ ಯುವತಿಯ ತಂದೆಗೆ ಗುಂಡು ಹಾರಿಸಿ ಕೊಂದ ಆರೋಪಿ; ಅಪಾಯದ ಅರಿವಿದ್ದೂ ಸುಮ್ಮನಿದ್ದ ಪೊಲೀಸರು

0
740

ಸನ್ಮಾರ್ಗ ವಾರ್ತೆ

ಲಕ್ನೊ, ಫೆ.12: ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯ ತಂದೆಯನ್ನು ಪ್ರಕರಣದ ಆರೋಪಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಶಿಕೊಹಾಬಾದ್‍ನಲ್ಲಿ ಘಟನೆ ನಡೆದಿದ್ದು ಅತ್ಯಾಚಾರ ಕೇಸನ್ನು ಹಿಂಪಡೆಯುವುದಕ್ಕೆ ಸಿದ್ಧರಾಗದಕ್ಕೆ ಆರೋಪಿ ಯುವತಿಯ ತಂದೆಯನ್ನು ಕೊಂದಿದ್ದಾನೆ. 2019ರಲ್ಲಿ ಅಚ್ಚಮನ್ ಉಪಧ್ಯಾಯ ಎಂಬಾತ ಯುವತಿಯನ್ನು ಅತ್ಯಾಚಾರ ಮಾಡಿದ್ದನು. ಪ್ರಕರಣ ವಾಪಾಸು ಪಡೆಯದಿದ್ದರೆ ಇಡೀ ಕುಟುಂಬವನ್ನು ಕೊಲ್ಲುವೆ ಎಂದು ಆರೋಪಿ ಬೆದರಿಕೆ ಹಾಕಿದ್ದನು. ನಂತರ ಯುವತಿಯ ಕುಟುಂಬ ಉಪಾಧ್ಯಾಯನ ಬೆದರಿಕೆಯನ್ನು ಪೊಲೀಸರಿಗೆ ತಿಳಿಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಸೋಮವಾರ ರಾತ್ರೆ ಯುವತಿಯ ತಂದೆಯನ್ನು ಆತ ಕೊಂದು ಹಾಕಿದ್ದಾನೆ. ಘಟನೆಯ ನಂತರ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸ್ಟೇಶನ್ ಹೌಸ್ ಆಫಿಸರ್ ರನ್ನು ಅಮಾನತುಗೊಳಿಸಲಾಗಿದೆ. ಬೆದರಿಕೆ ಹಾಕಿರುವ ದೂರು ನೀಡಿಯೂ ಕ್ರಮ ಕೈಗೊಳ್ಳದಿರುವುದಕ್ಕೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.