ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಫೆ.12: ಭಾರತ ಸಂದರ್ಶನಕ್ಕೆ ಅತ್ಯುತ್ಸಾಹದಲ್ಲಿರುವೆ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ ತನ್ನ ಗೆಳೆಯ ಹಾಗೂ ಮಾನ್ಯ ವ್ಯಕ್ತಿಯಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಡೊನಾಲ್ಡ್ ಟ್ರಂಪ್ ಫೆಬ್ರುವರಿ 24, 25ಕ್ಕೆ ಭಾರತವನ್ನು ಅವರು ಸಂದರ್ಶಿಸಲಿದ್ದಾರೆ. ಮೋದಿಯೊಂದಿಗೆ ಮಾತಾಡಿದ್ದೇನೆ. ವಿಮಾನ ನಿಲ್ದಾಣದಿಂದ 70 ಲಕ್ಷ ಮಂದಿ ತನ್ನನ್ನು ಸ್ವಾಗತಿಸುವರೆಂದು ಮೋದಿ ಹೇಳಿದ್ದಾರೆ. ಹ್ಯೂಸ್ಟನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ 50 , 000 ಮಂದಿ ಭಾಗವಹಿಸಿದ್ದರು. ಅದು ಅಷ್ಟು ದೊಡ್ಡದಾಗಿತ್ತು ಎಂದು ಈಗ ನನಗೆ ಅನಿಸುವುದಿಲ್ಲ. ಅಹ್ಮದಾಬಾದಿನ ಸ್ವಾಗತ ವೇದಿಕೆ ಜಗತ್ತಿನ ದೊಡ್ಡ ಸ್ಟೇಡಿಯಂ ಆಗಿದೆ ಎಂದು ಟ್ರಂಪ್ ಪತ್ರಕರ್ತರಿಗೆ ತಿಳಿಸಿದರು.
ಅಹ್ಮದಾಬಾದ್ನಲ್ಲಿ ಹೊಸದಾಗಿ ಕಟ್ಟಿಸಿದ ಮೊಟ್ಟೇರ ಸ್ಟೇಡಿಯಂನಲ್ಲಿ ಟ್ರಂಪ್ ಮೋದಿ ಜಂಟಿಯಾಗಿ ಬೃಹತ್ ಜನಸಂದಣಿಯನ್ನು ಅಭಿಸಂಭೋದಿಸಿ ಮಾತಾಡಲಿದ್ದಾರೆ ಎನ್ನಲಾಗಿದೆ.












