ಸನ್ಮಾರ್ಗ ವಾರ್ತೆ
ಬೀಜಿಂಗ್, ಫೆ. 18: ಕೊರೊನಾ ವೈರಸ್ ವಿರುದ್ಧ ಪ್ರತಿರೋಧ ಕಾರ್ಯಕ್ಕೆ ನೇತೃತ್ವ ನೀಡಿದ ಆರೋಗ್ಯ ಕಾರ್ಯಕರ್ತರಿಗೂ ರೋಗ ವ್ಯಾಪಿಸುವ ಆತಂಕ ದಟ್ಟವಾಗಿದೆ. ಈವರೆಗೆ ಆರು ಮಂದಿ ಆರೋಗ್ಯ ಕಾರ್ಯಕರ್ತರು ಮೃತಪಟ್ಟಿದ್ದು ಕೊನೆಯದಾಗಿ ಆಸ್ಪತ್ರೆಯ ನಿರ್ದೇಶಕ ಲಿಯು ಶಿಮಿಂಗ್ ಮೃತಪಟ್ಟಿದ್ದು ವರದಿಯಾಗಿದೆ. ಮಂಗಳವಾರ ಬೆಳಗ್ಗೆ ವುಚಾಂಗ್ ಆಸ್ಪತ್ರೆಯ ನಿರ್ದೇಶಕ ಲಿಯು ಶಿಮಿಂಗ್ ಮೃತಪಟ್ಟರು.
ಕೊರೊನೊ ವೈರಸ್ ಪೀಡಿತರಾಗಿ ಆಸ್ಪತ್ರೆಯೊಂದರ ನಿರ್ದೇಶಕರ ಸಾವು ಇದೇ ಪ್ರಥಮ ಬಾರಿಗೆ ಸಂಭವಿಸಿದೆ. ಇದುವರೆಗೆ 1800 ಮಂದಿ ಮೃತಪಟ್ಟಿದ್ದಾರೆ. 72000 ಮಂದಿಗೆ ಕೊರೊನಾ ಸೋಂಕು ಹರಡಿದೆ. ಶಿಮಿಂಗ್ರ ಸಾವಿನ ಸುದ್ದಿ ಬಹಿರಂಗವಾಗುವುದರೊಂದಿಗೆ ಸರಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ಸ್ಫೋಟಗೊಂಡಿದೆ.












