ಸನ್ಮಾರ್ಗ ವಾರ್ತೆ
ಬಹ್ರೈನ್, ಫೆ. 20: ಕೊರೊನಾ ಸೋಂಕು 25 ರಾಷ್ಟ್ರಗಳಲ್ಲಿ ವ್ಯಾಪಿಸಿದ್ದು ಇರಾನ್ನ ಏಳನೇ ದೊಡ್ಡ ನಗರ ಖೊಂನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಧ್ಯಏಶ್ಯದಲ್ಲಿ ಕೊರೊನಾ ವೈರಸ್ನಿಂದಾಗಿ ಮೃತಪಟ್ಟಿರುವ ಪ್ರಥಮ ಘಟನೆಯಿದು ಎನ್ನಲಾಗಿದೆ. ಮೃತರು ಕೊರೊನಾಕ್ಕೆ ತುತ್ತಾಗಿದ್ದು ಮೊದಲೇ ತಪಾಸಣೆಯ ವೇಳೆ ದೃಢವಾಗಿತ್ತು. ಹೆಚ್ಚು ವಯಸ್ಸಾಗಿರುವುದು ಮತ್ತು ರೋಗ ನಿರೋಧಕ ಶಕ್ತಿ ಕುಂಠಿತವಾಗಿರುವುದು ಇಬ್ಬರ ಸಾವಿಗೆ ಕಾರಣವೆಂದು ಇರಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಇಬ್ಬರ ಸಾವಿನ ನಂತರ ರೋಗ ಲಕ್ಷಣಗಳು ಕಂಡು ಬಂದಿರುವವರ ವರದಿಯನ್ನು ಇರಾನ್ ಸರಕಾರ ಕೇಳಿದೆ. ಜೊತೆಗೆ ಕೊರೊನಾ ಪ್ರತಿರೋಧಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಕೊರೊನಾದಿಂದ ಚೀನದ ಹೊರಗೆ ಮೃತಪಟ್ಟವರ ಸಂಖ್ಯೆ ಇದರೊಂದಿಗೆ ಎಂಟಕ್ಕೆ ತಲುಪಿತು. ಚೀನದಲ್ಲಿ ಮತ್ತೂ 136 ಮಂದಿ ಮೃತಪಟ್ಟಿರುವುದರಿಂದ ಅಲ್ಲಿ ಮೃತಪಟ್ಟವರ ಸಂಖ್ಯೆ 2004ಕ್ಕೇರಿಕೆಯಾಗಿದೆ. ವುವಾಂಗ್ ಆಸ್ಪತ್ರೆಯ ಡೆಪ್ಯುಟಿ ಚೀಫ್ ನರ್ಸ್, ತಂದೆ, ತಾಯಿ, ಸಹೋದರ ಮೃತಪಟ್ಟಿದ್ದು ಆಸ್ಪತ್ರೆ ಸಿಬ್ಬಂದಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಿಬ್ಬಂದಿಗಳ ಮರಣ ಸಂಭವಿಸಿದ್ದರಿಂದ ಅವರ ಸುರಕ್ಷೆ ದೃಢಪಡಿಸಲು ಚೀನದ ಅಧ್ಯಕ್ಷ ಶಿ ಜಿನ್ಪಿಂಗ್ ಸೂಚನೆ ನೀಡಿದ್ದಾರೆ.












