ಸನ್ಮಾರ್ಗ ವಾರ್ತೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಏಳು ವರ್ಷದಲ್ಲಿ ದಾಖಲೆಯಲ್ಲಿ ದರ ಹೆಚ್ಚಳವಾಗಿದ್ದು ಬುಧವಾರ ಟ್ರಾಯ್ ಔನ್ಸ್ ಗೆ 1609 ಡಾಲರ್ ಗೆ ಲುಪಿತ್ತು. ಗಲ್ಫ್ ರಾಷ್ಟ್ರಗಳಲ್ಲಿ ಚಿನ್ನ ಗ್ರಾಂಗೆ 3550 ರೂಪಾಯಿ, ಸಿಂಗಾಪುರದಲ್ಲಿ 3650 ರೂಪಾಯಿಯಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ನ ಹೊಸ ವರದಿಯ ಪ್ರಕಾರ ಆರ್ಥಿಕ ಕ್ಷೇತ್ರದ ನೆಗೆತ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕೊರೊನಾ ವೈರಸ್ನಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ತಲೆದೋರಿದ್ದು ಹೂಡಿಕೆದಾರರು ಚಿನ್ನದ ಮೇಲೆ ಬಂಡವಾಳ ಹಾಕುತ್ತಿರುವುದು ದರ ಹೆಚ್ಚುವುದಕ್ಕೆ ಕಾರಣವಾಗಿದೆ. ರೂಪಾಯಿಯ ದರ ಕುಸಿತ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಕಂಡು ಬರುತ್ತಿದೆ.
ಕೇರಳದಲ್ಲಿ ಬುಧವಾರ ಚಿನ್ನದ ಬೆಲೆ ಪವನ್ಗೆ 280 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆ ಬೆಲೆಯಾದ 30680 ರೂಪಾಯಿಗೆ ತಲುಪಿತು. ಗ್ರಾಮ್ ಗೆ 3835 ರೂಪಾಯಿ. ಮಂಗಳವಾರ 30400 ರೂಪಾಯಿ. ಜನವರಿ ಒಂದಕ್ಕೆ ಗ್ರಾಮ್ಗೆ 3675ರೂ. ಪವನ್ಗೆ 29000 ರೂಪಾಯಿ ಆಗಿತ್ತು. ಒಂದೂವರೆ ತಿಂಗಳಲ್ಲಿ ಗ್ರಾಂಗೆ 210 ರೂಪಯಿ ಪವನ್ಗೆ 1680 ರೂಪಾಯಿ ಹೆಚ್ಚಳವಾಗಿದೆ. ಚಿನ್ನದ ಗಟ್ಟಿಗೆ ಬ್ಯಾಂಕ್ ದರ ಕಿಲೊಗ್ರಾಮ್ಗೆ 42,60,000 ರೂ ಆಗಿದೆ.












