ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 22: ರಾಜಕೀಯ ಸ್ಟ್ರಟಜಿಸ್ಟ್ ಪ್ರಶಾಂತ್ ಕಿಶೋರ್ ತಮ್ಮ ಪಾರ್ಟಿಗೆ ಸೇರುವುದಾದರೆ ವಿರೋಧವಿಲ್ಲ ಎಂದು ಆಮ್ ಆದ್ಮಿಪಾರ್ಟಿ ಹಿರಿಯ ನಾಯಕ ಸಂಜಯ್ ಸಿಂಗ್ ಹೇಳಿದರು. ಪ್ರಶಾಂತ್ ಕಿಶೋರ್ ತಂತ್ರಗಳು ದಿಲ್ಲಿಯಲ್ಲಿ ಅರವಿಂದ್ ಕೇಜ್ರಿವಾಲ್ರ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಇದರ ಬೆನ್ನಿಗೆ ಈಗ ಆಮ್ ಆದ್ಮಿ ಅವರನ್ನು ಪಾರ್ಟಿಗೆ ಸ್ವಾಗತಿಸಿದೆ. ಪ್ರಶಾಂತ್ ಕಿಶೋರ್ ಈ ಹಿಂದೆ ಜೆಡಿಯುನಲ್ಲಿದ್ದರು. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಅವರನ್ನು ಜೆಡಿಯುವಿನಿಂದ ಉಚ್ಚಾಟಿಸಲಾಗಿತ್ತು.
ಇದೇ ವೇಳೆ, ಬಿಹಾರದಲ್ಲಿ ಮಹಾಸಖ್ಯ ರೂಪಿಸುವ ಯತ್ನಗಳನ್ನು ಪ್ರಶಾಂತ್ ಕಿಶೋರ್ ಆರಂಭಿಸಿದ್ದಾಗಿ ವರದಿಯಾಗಿದೆ. ಹಿಂದೂಸ್ತಾನಿ ಅವಾಂ ಮೋರ್ಚ ಅಧ್ಯಕ್ಷ ಜಿತನ್ ರಾಂ ಮಾಜಿ. ಆರ್ಎಲ್ ಎಸ್ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹರೊಂದಿಗೆ ಪ್ರಶಾಂತ್ ಕಿಶೋರ್ ಚರ್ಚೆ ನಡೆಸಿದ್ದಾರೆ.












