ಸನ್ಮಾರ್ಗ ವಾರ್ತೆ
ಮುಂಬೈ, ಫೆ. 22: ನಾಗಪುರದ ಆರೆಸ್ಸೆಸ್ ಕಚೇರಿಯ ಸಮೀಪದ ಮೈದಾನದಲ್ಲಿ ಭೀಂ ಆರ್ಮಿ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಭಾಗವಹಿಸುವ ಕಾರ್ಯಕ್ರಮ ನಡೆಸಲು ಮುಂಬೈ ಹೈಕೋರ್ಟು ಅನುಮತಿ ನೀಡಿದೆ. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸುವ ಭೀಂ ಆರ್ಮಿ ಮತ್ತು ಆರೆಸ್ಸೆಸ್ನ ಆಶಯಗಳು ತದ್ವಿರುದ್ಧವಾದ್ದರಿಂದ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರು.
ಇದರ ವಿರುದ್ಧ ಸಲ್ಲಿಸಿದ ಅರ್ಜಿಯಲ್ಲಿ ನಿಬಂಧನೆಗಳೊಂದಿಗೆ ನಾಗಪುರ ಹೈಕೋರ್ಟುಪೀಠ ಅನುಮತಿ ನೀಡಿದೆ. ಪ್ರತಿಭಟನೆ ಹೋರಾಟ ಆಗಬಾರದು. ಪ್ರಚೋದಕ ಭಾಷಣ ಮಾಡಬಾರದು ಈ ವಿಷಯಗಳಿಗೆ ಚಂದ್ರ ಶೇಖರ್ ಆಝಾದ್ ಲಿಖಿತ ಭರವಸೆ ಕೊಡಬೇಕೆಂದು ಕೋರ್ಟು ನಿಬಂಧನೆ ಹೇರಿದೆ.












