ಮೋದಿ-ಟ್ರಂಪ್ ಸಮಾಲೋಚನೆಯಲ್ಲಿ: ಧಾರ್ಮಿಕ ಸ್ವಾತಂತ್ರ್ಯ ಚರ್ಚೆಯಾಗಲಿದೆ- ವೈಟ್‍ಹೌಸ್

0
498

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಫೆ. 22: ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಮಾಲೋಚನೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಚರ್ಚೆ ನಡೆಯಲಿದೆ ಎಂದು ವೈಟ್ ಹೌಸ್ ತಿಳಿಸಿದೆ. ಶುಕ್ರವಾರ ವೈಟ್ ಹೌಸ್‍ನ ಪ್ರಕಟಣೆ ತಿಳಿಸಿದ್ದು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಅಮೆರಿಕ ಗೌರವಿಸುತ್ತಿದೆ ಎಂದು ವೈಟ್ ಹೌಸ್ ತಿಳಿಸಿದೆ. ಮೋದಿಯೊಂದಿಗಿನ ಪ್ರಜಾಪ್ರಭುತ್ವ, ಧಾರ್ಮಿಕ ಸ್ವಾತಂತ್ರ್ಯ ಕುರಿತು ಚರ್ಚೆ ನಡೆಯಲಿದೆ. ಈ ವಿಷಯವನ್ನು ಟ್ರಂಪ್ ಕೆದಕಲಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯದ ಕುರಿತು ಯಾವುದೇ ಚರ್ಚೆ ನಡಯುವುದು ಮತ್ತು ಅದು ಅಮೆರಿಕ ಸರಕಾರಕ್ಕೆ ಸಂಬಂಧಿಸಿದಂತೆ ಪ್ರಧಾನವಾದುದು ಎಂದು ವೈಟ್ ಹೌಸ್ ಪ್ರತಿನಿಧಿ ಹೇಳಿದ್ದಾರೆ.

ಸಿಎಎ ಕುರಿತು ಚರ್ಚೆ ನಡೆಯುವುದೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿಲ್ಲ. ಅಮೆರಿಕದ ಸಾರ್ವತ್ರಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಅಮೆರಿಕ ಯಾವಾಗಲೂ ಬದ್ಧವಾಗಿದೆ. ಭಾರತವನ್ನೂ ಈ ನೀತಿ ಅನುಸರಿಸಲು ಪ್ರೇರೇಪಿಸುವೆವು. ಸಿಎಎಯಲ್ಲಿ ಅಮೆರಿಕಕ್ಕೆ ಆತಂಕ ಇದೆ ಎಂದು ವೈಟ್‍ಹೌಸ್ ಪ್ರತಿನಿಧಿ ಸೂಚನೆ ನೀಡಿದರು.