ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 26: ಗಲಭೆಯ ವೇಳೆ ದಿಲ್ಲಿಯಿಂದ ಕಾಣೆಯಾದ ವ್ಯಕ್ತಿಯ ಮೃತದೇಹ ಚರಂಡಿ ಗುಂಡಿಯಲ್ಲಿ ಪತ್ತೆಯಾಗಿದೆ. ಭೋಜ್‍ಪುರಿಯಿಂದ ಹಾದುಹೋಗುವ ಚರಂಡಿಯಲ್ಲಿ ಮೃತದೇಹ ಕಂಡು ಬಂದಿದೆ. ಇವರ ಕೈ ಮಾತ್ರ ಹೊರಗಿದೆ. ದೇಹದಭಾಗ ಸಂಪೂರ್ಣ ಮುಳುಗಿದೆ. ಮೃತದೇಹ ಹೊರತರುವ ಶ್ರಮ ನಡೆಯುತ್ತಿದೆ.
ತಮ್ಮ ಜೊತೆ ಇದ್ದ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದರು. ನಂತರ ಹುಡುಕಾಟ ಆರಂಭವಾಗಿತ್ತು. ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿದೆ. ಹಿಂಸಾಚಾರದ ವೇಳೆ ಓಡಿ ಪಾರಾಗುವ ವೇಳೆ ಕೊಳಚೆ ಗುಂಡಿಗೆ ಬಿದ್ದಿರಬಹುದು ಎಂದು ತಿಳಿಯಲಾಗಿದೆ.












