ದಿಲ್ಲಿ ಹಿಂಸಾಚಾರ: ಪೊಲೀಸರು ವಿಫಲ; ವೃತ್ತಿಪರತೆ ಇಲ್ಲ- ಸುಪ್ರೀಂ ಕೋರ್ಟು

0
1472

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 26: ಪೌರತ್ವ ಪ್ರತಿಭಟನಾಕಾರರ ಮೇಲೆ ನಡೆದ ದಾಳಿಯ ಘಟನೆಯಲ್ಲಿ ದಿಲ್ಲಿ ಪೊಲೀಸರನ್ನು ಸುಪ್ರೀಂ ಕೋಟು ತೀವ್ರ ತರಾಟೆಗೆತ್ತಿಕೊಂಡಿದೆ. ಕಾನೂನು ರೀತಿಯಲ್ಲಿ ಕೆಲಸ ಮಾಡದ್ದು ದಿಲ್ಲಿಯ ಅಹಿತಕರ ಘಟನೆಗಳು ಉಂಟಾಗಲು ಕಾರಣವೆಂದು ಸುಪ್ರೀಂಕೋರ್ಟು ಬೆಟ್ಟು ಮಾಡಿದೆ. ಪೊಲೀಸ್‍ಗೆ ವೃತ್ತಿಪರತೆ ಇಲ್ಲ. ಪೊಲೀಸರು ಸಂಬಂಧ ಇರಿಸಿಕೊಳ್ಳಬೇಕಾಗಿದ್ದು ಸಂವಿಧಾನಿಕ ಸಂಸ್ಥೆಯೊಂದಿಗೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರಿಗೆ ಜಸ್ಟಿಸ್ ಕೆ ಎಂ ಜೋಸೆಫ್, ಎಸ್‍ ಕೆ ಕೌಲ್ ಸದಸ್ಯರಾಗಿದ್ದ ಪೀಠ ಹೇಳಿದೆ. ದುರದೃಷ್ಟಕರ ಘಟನೆಗಳು ದೇಶದ ರಾಜಧಾನಿಯಲ್ಲಿ ನಡೆದಿದೆ. ಪೊಲೀಸರು ಹಲವು ಘಟ್ಟಗಳಲ್ಲಿ ಕಾನೂನಿನಂತೆ ಕೆಲಸ ಮಾಡಿಲ್ಲ. ಸ್ವಾತಂತ್ರ್ಯ ಇಲ್ಲದ ಪರಿಸ್ಥಿತಿ ಹಲವು ಸ್ಥಳಗಳಲ್ಲಿ ಕೆಲಸ ಮಾಡಿದ ಪೊಲೀಸರಲ್ಲಿ ಇತ್ತು ಎಂದು ಸುಪ್ರೀಂಕೋರ್ಟು ಹೇಳಿತು.

ಇದೇವೇಳೆ ದಿಲ್ಲಿಯ ಹಿಂಸಾಚಾರ ಕೋರ್ಟಿನ ಮೇಲ್ನೋಟದಲ್ಲಿ ತನಿಖೆ ಮಾಡಬೇಕೆಂಬ ಅರ್ಜಿಯನ್ನು ಸುಪ್ರೀಂಕೋರ್ಟು ತಿರಸ್ಕರಿಸಿದೆ. ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಈಗ ದಿಲ್ಲಿ ಹೈಕೋರ್ಟು ಪರಿಗಣಿಸುತ್ತಿದೆ ಎಂದು ಕೋರ್ಟು ತಿಳಿಸಿತು.
ಶಾಹೀನ್ ಬಾಗ್ ಪ್ರಕರಣದಲ್ಲಿ ಕಕ್ಷಿಯಾಗಿ ಸೇರಲು ಭೀಮ್ ಆರ್ಮಿ ನಾಯಕ ಚಂದ್ರ ಶೇಖರ ಆಝಾದ್ ಸಲ್ಲಿಸಿದ ಅರ್ಜಿಯಲ್ಲಿ ಸುಪ್ರೀಂಕೋರ್ಟು ವಿಚಾರಣೆ ನಡೆಸುತ್ತಿತ್ತು.