ಮುಂದೇನಿದೆ ಎಂಬ ಬೆದರಿಕೆಯಲ್ಲಿ ದಿಲ್ಲಿ: ಹಿಂಸಾಚಾರಕ್ಕಾಗಿ ಪೂರ್ವಸಿದ್ಧತೆ ನಡೆದಿತ್ತೇ? ವೀಡಿಯೊಗಳು ಬಹಿರಂಗವಾಗದಂತೆ ನೋಡಿಕೊಳ್ಳಲಾಗಿತ್ತೆ?

0
1137

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 26: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂದರ್ಶನದ ಸಮಯದಲ್ಲಿ ಜಗತ್ತಿನ ಮುಂದೆ ದೇಶದ ವರ್ಚಸ್ಸಿಗೆ ಕಳಂಕ ತಟ್ಟಿದರೂ ದಿಲ್ಲಿಯಲ್ಲಿ ಮುಸ್ಲಿಂ ವಿರೋಧಿ ಗಲಭೆಯನ್ನು ಪ್ರಧಾನಿ ಮೋದಿ ಖಂಡಿಸದ್ದು ಯಾಕೆ? ದಿಲ್ಲಿ ಪೊಲೀಸ್ ಏನೂ ಮಾಡುವುದಿಲ್ಲ ಎಂದು ಗೊತ್ತಾಗಿಯೂ ಸೇನೆಯನ್ನು ನಿಯೋಜಿಸಬೇಡಿ ಎಂದು ಗೃಹ ಸಚಿವ ಅಮಿತ್ ಶಾ ಹೇಳುವುದು ಯಾಕೆ? ತಮ್ಮ ಸ್ವಕ್ಷೇತ್ರದಲ್ಲಿ ಮತದಾರರು ತಿರಸ್ಕರಿಸಿದ ಬಿಜೆಪಿ ನಾಯಕ ಕಪಿಲ್ ಮಿಶ್ರ ರಿಗೆ ಯಾವುದೇ ಪ್ರಭಾವ ಇಲ್ಲದ ಇತರ ಪ್ರದೇಶದಲ್ಲಿ ವ್ಯಾಪಕ ಹಿಂಸಾಚಾರ ನಡೆಸುವುದು ಹೇಗೆ?

ಮೌಜ್‍ಪುರ ಚೌಕ್ ಬಳಿ ಕಟ್ಟಿದ ಮೈಕ್‍ನಲ್ಲಿ ಕಳೆದ ಮೂರು ದಿವಸಗಳಿಂದ ವಿಷಕಾರುವ ದ್ವೇಷದ ಮಾತುಗಳು ಕಲ್ಲುಗಳನ್ನು ಟ್ರಾಕ್ಟರ್ ನಲ್ಲಿ ತಂದು, ಆಯುಧಗಳನ್ನು ತಲುಪಿಸಿ ಗಲಭೆಯನ್ನು ಸೃಷ್ಟಿಸಲಾಗಿದೆ ಎಂದು ಎಲ್ಲರೂ ಏಕಕಂಠದಲ್ಲಿ ಹೇಳುತ್ತಿದ್ದಾರೆ. ವ್ಯಾಪಕ ಸಿದ್ಧತೆಯ ಚಿತ್ರಗಳು, ವೀಡಿಯೊಗಳು ಹೊರಬರದಂತೆ ದೊಡ್ಡ ಪೂರ್ವ ಯೋಜನೆಯನ್ನು ಸಂಘಪರಿವಾರ ಮಾಡಿಕೊಂಡಿದೆ. ಇದನ್ನು ಕೂಡ ಗಮನಿಸುವಾಗ ಇದಕ್ಕಿಂತಲೂ ದೊಡ್ಡ ಅಪಾಯ ದಿಲ್ಲಿಯನ್ನು ಕಾದಿದೆ ಎಂದು ದಿಲ್ಲಿ ನಿವಾಸಿಗಳಲ್ಲಿ ಭೀತಿ ಆವರಿಸಿದೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಇದ್ದ ಮಂಗಳವಾರದ ಸಭೆಯಲ್ಲಿ ದಿಲ್ಲಿ ಸುಭದ್ರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದಾರೆ. ದಿಲ್ಲಿ ಪೊಲೀಸ್‍ನ ಉನ್ನತ ಅಧಿಕಾರಿಗಳು ಅದೇ ಮಾತುಗಳನ್ನು ಹೇಳುತ್ತಿದ್ದಾರೆ. ಇದುವರೆಗೆ ವರ್ತಿಸಿದಂತೆ ದಿಲ್ಲಿ ಪೊಲೀಸರು ವರ್ತಿಸಲಿದ್ದಾರೆ ಎಂದು ಇದರಿಂದ ತಿಳಿಯಬಹುದು. ಹಿಂದೂ ಮುಸ್ಲಿಮರನ್ನು ಪರಸ್ಪರ ಹೊಡೆದಾಡಿಸಿ ಕೋಮು ಗಲಭೆಯಾಗಿ ಮಾಡಲಾಗಿದೆ. ದಿಲ್ಲಿಯ ಹೆಚ್ಚಿನ ಸ್ಥಳಗಳಲ್ಲಿ ಮುಸ್ಲಿಮರನ್ನು ಹುಡುಕಿ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ.

1984 ಅನ್ನು ನೆನಪಿಸುವ ಕೆಟ್ಟ ಸೂಚನೆಯನ್ನು ದಿಲ್ಲಿ ತನಗೆ ನೀಡುತ್ತಿದೆ ಎಂದು ಸ್ವರಾಜ್ ಅಭಿಯಾನ್ ನಾಯಕ ಯೋಗೇಂದ್ರ ಯಾದವ್ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ದೇಶದಿಂದ ಹೊರಹೋಗುತ್ತಿದ್ದಂತೆ ಅಪಾಯಕಾರಿಯಾದ ಏನೋ ನಡೆಯಲಿದೆ ಎಂದು ಎಲ್ಲರಲ್ಲೂ ಹೆದರಿಕೆಯುಂಟಾಗಿದೆ. ಇದನ್ನು ನಿವಾರಿಸುವ ನಿರ್ಣಾಯಕ ತಾಸುಗಳು ನಮ್ಮ ಮುಂದಿದೆ ಎಂದು ಅವರು ಹೇಳಿದ್ದಾರೆ.

ಮಂಗಳವಾರ, ಬುಧವಾರಗಳಲ್ಲಿ ದಾಳಿಯನ್ನು ತಡೆಯುವ ಶಕ್ತಿಶಾಲಿ ಕ್ರಮ ಸಂಬಂಧಿಸಿದವರಿಂದ ಆದರೆ ಮಾತ್ರ ಆ ಹೆದರಿಕೆ ಇಲ್ಲದಾಗಬಹುದು ಎಂದು ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದರು.