ಕೋಮು ದ್ವೇಷ ಪೋಸ್ಟ್: ಶ್ರೀಜಿತ್ ರವೀಂದ್ರನ್ ಬಂಧನ- ಪೋಲಿಸರಿಂದಲೇ ಮೋಹಭಂಗ ಟ್ರೊಲ್ ವೀಡಿಯೊ

0
1438

ಸನ್ಮಾರ್ಗ ವಾರ್ತೆ

ಪಾಲಕ್ಕಾಡ್, ಫೆ. 26: ಫೇಸ್‍ಬುಕ್‍ನಲ್ಲಿ ಗಲಭೆಗೆ ಕರೆ ನೀಡಿದ ಸಂಘ ಪರಿವಾರದ ವ್ಯಕ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆತನ ಬಂಧನದ ವೀಡಿಯೊವನ್ನೂ ಹೊರಬಿಟ್ಟಿದ್ದಾರೆ. ಅಗಳಿ ಕಳ್ಳಮಲ ಎಂಬಲ್ಲಿನ ಶ್ರೀಜಿತ್ ರವೀಂದ್ರನ್ ದ್ವೇಷಪೂರಿತ ವೀಡಿಯೊ ಫೇಸ್‍ಬುಕ್‍ನಲ್ಲಿ ಹಾಕಿದ್ದನು. ಈತನನ್ನು ಬಂಧಿಸುವ ದೃಶ್ಯವನ್ನು ಟ್ರೋಲ್ ರೀತಿಯಲ್ಲಿ ಪೊಲೀಸರೇ ಪೋಸ್ಟ್ ಮಾಡಿದಾರೆ. ಕೋಮು ದ್ವೇಷ ಹರಡಲು ಯತ್ನಿಸಿದ್ದಕ್ಕಾಗಿ ಕೇರಳ ಪೊಲೀಸರ ಸಾಮಾಜಿಕ ಮೀಡಿಯ ಸೆಂಟರ್ ಫೇಸ್‍ಬುಕ್‍ನಲ್ಲಿ ಟ್ರೋಲ್ ಪೋಸ್ಟ್ ಮಾಡಿದೆ. ಮೋಹನ್ ಲಾಲ್ ನಟಿಸಿದ ತನ್ನಿಷ್ಟ, ಎನ್ನಿಷ್ಟ ಎಂಬ ಸಿನೆಮಾದ ಮೋಹಭಂಗ ಮನಸ್ಸಿಲೆ ಎಂಬ ಹಾಡನ್ನು ಟ್ರೋಲ್ ವೀಡಿಯೊ ಮಾಡಿದ್ದಾರೆ. ದಿಲ್ಲಿಯ ಗಲಭೆಯನ್ನು ಬೆಂಬಲಿಸಿ ಗಲಭೆಗೆ ಈತ ಕರೆ ನೀಡಿದ್ದ. ಅಗಳಿ ಪೊಲೀಸರು ಬೆಳಗ್ಗೆ ಮನೆಗೆ ಬಂದು ಈತನನ್ನು ಕಸ್ಟಡಿಗೆ ಪಡೆದರು. ಈತನ ವಿರುದ್ಧ ಹಲವು ದೂರುಗಳಿವೆ. ಈ ಆಧಾರದಲ್ಲಿ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲಪ್ಪುರಂ ಅಗಳಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಎಂಟು ದೂರುಗಳು ಇವೆ. ವಕೀಲ ಶ್ರೀಜಿತ್ ಪೆರಮನ, ಡಿವೈಎಫ್‍ಐ ಸಹಿತ ಸಂಘಟನೆಗಳು ಈತನ ವಿರುದ್ಧ ದೂರು ನೀಡಿವೆ. ಧಾರ್ಮಿಕ ದ್ವೇಷ ಬೆಳೆಸಿದ ಆರೋಪವನ್ನು ಈತನ ಮೇಲೆ ಹೊರಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈತ ದ್ವೇಷಪೂರಿತ ಹೇಳಿಕೆ ನೀಡಿದ್ದ. ಕೆಟ್ಟ ಪದಗಳನ್ನು ಬಳಸಿದ್ದ.

ഞങ്ങൾ ഇങ്ങ് എടുത്തു കേട്ടോ

വർഗ്ഗീയ ചേരിതിരിവ് പ്രോത്സാഹിപ്പിക്കുന്ന സന്ദേശം പ്രചരിപ്പിച്ചയാളെ അഗളി പോലീസ് അറസ്റ്റ് ചെയ്തുനേരായ വാർത്തകൾ ശരിയായ മാർഗ്ഗത്തിലൂടെ അറിയാൻ സ്റ്റേറ്റ് പോലീസ് മീഡിയ സെന്ററിന്റെ യൂട്യൂബ് ചാനൽ സബ്സ്ക്രൈബ് ചെയ്യുകhttps://www.youtube.com/channel/UCr8FeLTMhq2NEXRLY3Zoeyw

Posted by State Police Media Centre Kerala on Tuesday, February 25, 2020