ಸನ್ಮಾರ್ಗ ವಾರ್ತೆ
ದೋಹ; ಮಾ. 9- ಭಾರತ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್, ಸಿರಿಯ, ನೇಪಾಳ, ಇರಾನ್, ಇರಾಕ್, ಈಜಿಪ್ಟ್, ಚೀನಾ, ಫಿಲಿಪಿನ್ಸ್, ಬಾಂಗ್ಲಾದೇಶ ಹಾಗೂ ದಕ್ಷಿಣ ಕೊರಿಯಾ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕತರ್ ನಿರ್ಬಂಧ ಹೇರಿದೆ
ಕತಾರ್ ನಲ್ಲಿ ಕೆಲಸದ ಪರವಾನಿಗೆ ಹೊಂದಿರುವವರು, ತಾತ್ಕಾಲಿಕ ಭೇಟಿಗೆ ಬರುವವರು ಮತ್ತು ಭೇಟಿಗಾಗಿ ವೀಸಾ ಪಡೆಯಲು ಅರ್ಹರಾಗಿರುವ ದೇಶಗಳ ಜನರು ಸೇರಿದಂತೆ ಎಲ್ಲರಿಗೂ ಈ ನಿಷೇಧ ಅನ್ವಯವಾಗಲಿದೆ.
ಒಟ್ಟು 14 ದೇಶದ ಜನರಿಗೆ ಕತಾರ್ ಗೆ ಆಗಮಿಸಲು ಸದ್ಯ ನಿರ್ಬಂಧ ಹೇರಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿದ್ದು ಈ ಆದೇಶವು ಮಾರ್ಚ್ 9ರಿಂದ ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿದೆ ಎಂದು ಹೇಳಲಾಗಿದೆ.
ಕತರ್ ನಲ್ಲಿ ವಾಸಿಸುವ ಎಲ್ಲಾ ಜನರು ಮತ್ತು ನಾಗರಿಕರು ಸಾಧ್ಯವಾದಷ್ಟು ಇತರ ದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಬೇಕು ಮತ್ತು ದೇಶದಲ್ಲಿರುವ ಎಲ್ಲರೂ ಬೇರೆ ದೇಶಗಳಿಗೆ ಪ್ರಯಾಣ ಮಾಡದಂತೆ ಸರಕಾರ ಕೇಳಿಕೊಂಡಿದೆ.












