ಕೊರೊನಾ-ಸಾನಿಟೈಸರ್ ಸುಲಭದಲ್ಲಿ ಮನೆಯಲ್ಲಿಯೇ ತಯಾರಿಸಬಹುದು- ವೀಡಿಯೊ ನೋಡಿ

0
1139

ಸನ್ಮಾರ್ಗ ವಾರ್ತೆ

ಕೊರೊನ ಪ್ರತಿರೋಧ ಸಾಮರ್ಥ್ಯಕ್ಕೆ ಮುಖ್ಯ ದಾರಿ ಅಲ್‍ಕೊಹಾಲ್ ಇರುವ ಸಾನಿಟೈಸರ್ ಉಪಯೋಗಿಸಿ ಕೈಗಳನ್ನು ಶುಚಿಗೊಳಿಸುವುದು. ಕೊರೊನಾ ಭಯ ದೇಶಾದ್ಯಂತ ಹರಡಿರುವುದರಿಂದ ಸಾನಿಟೈಸರ್ ಸಿಗುವುದಿಲ್ಲ. ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಸಾನಿಟೈಸರ್ ಮನೆಯಲ್ಲಿ ಮಾಡಿಕೊಳ್ಳಬಹುದು.

ಅಗತ್ಯ ಕಚ್ಚಾವಸ್ತು:

ಅಲೋವರ ಜೆಲ್

ಐಸೊಪ್ರೊಪೈಲ್ ಅಲ್‍ಕೊಹಾಲ್

ಹೈಡ್ರೋಜನ್ ಪೆರಾಕ್ಸೈಡ್

ಗ್ಲಿಸರೊಲ್

ಬೇಕಿದ್ದರೆ ಬಣ್ಣದ ಎಸೆನ್ಸ್

ಶುಚಿಯಾಗಿರುವ ಗಾಜಿನ ಪಾತ್ರೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಅಲೊವರ ಜೆಲ್ ತೆಗೆದುಕೊಳ್ಳಿ. ಅದಕ್ಕೆ ಐಸೊಪ್ರೊಪೈಲ್ ಅಲ್ಕೊಹಾಲ್ ಸೇರಿಸಿರಿ. ಐಸೊಪ್ರೊಪೈಲ್ ಆಲ್ಕೊಹಾಲ್ ಅಣುನಾಶಕ (ವೈರಸ್ ನಾಶಕವಾಗಿದೆ)ವಾಗಿದ್ದು ತಯಾರಾದ ಸಾನಿಟೈಸರ್ ನಲ್ಲಿ ಶೇ. 75ರಷ್ಟು ಇರಬೇಕು. ಇವುಗಳನ್ನು ಸರಿಯಾಗಿ ಮಿಶ್ರಣ ಮಾಡಿ. ಯಾವುದೇ ರೀತಿಯ ವೈರಸ್ ನಮ್ಮ ಪಾತ್ರೆ, ಉಪಯೋಗಿಸುವ ವಸ್ತುಗಳಿಗೆ ಬಂದಿದ್ದರೆ ಅವು ನಾಶವಾಗುವುದಕ್ಕೆ ಹೈಡ್ರೋಜನ್ ಪೆರೊಕ್ಸೈಡ್ ಸೇರಿಸಬಹುದು. ಹತ್ತು ಮಿಲಿ ಮಾತ್ರ ಸಾಕು. ತಯಾರಾದ ಮಿಶ್ರಣಕ್ಕೆ 15 ಮಿಲಿ ಗ್ಲಿಸರಾಲ್ ಸೇರಿಸಬೇಕು. ಕೈಗಳನ್ನು ಮಾಸ್ಚ್ಯೂರೈಸ್ ಮಾಡಲಿಕ್ಕಾಗಿ ಇವು ಸಹಾಯಕವಾಗಲಿದೆ.

ಬಣ್ಣಬೇಕಿದ್ದರೆ ಯಾವುದಾದರೂ ಬಣ್ಣ ಉಪಯೋಗಿಸಬಹುದು. ಸುವಾಸನೆಗಾಗಿ ಲಾವಂಡರ್ ಆಯಿಲ್‍ನಂತಹ ಎಸೆನ್ಸ್ ಬಳಸಬಹುದು. ಇದು ಜೆನ್ನಾಗಿ ಮಿಶ್ರಣ ಮಾಡಿದ ಬಳಿಕ ಸ್ವಲ್ಪ ಸಮಯ ಹಾಗೆಯೇ ಇಡಬೇಕು. ಈ ಸಮಯದಲ್ಲಿ ಅಲೊವರ ಜೆಲ್ ಸಂಪೂರ್ಣ ಬೆರೆಕೆಯಾಗುತ್ತದೆ. ಇದನ್ನು ಒಂದು ಬಾಟ್ಲಿಗೆ ಹಾಕಿ. ಇವು ಕೈಗೆ ಶುಚಿಗೊಳಿಸುವ ಸಾನಿಟೈಸರ್ ಆಗಿ ಬಳಸಬಹುದು. ಅಲೋವರ ಜೆಲ್, ಗ್ಲಿಸರಾಲ್ ಸುಲಭದಲ್ಲಿ ಸಿಗುತ್ತದೆ. ಐಸೊಪ್ರೊಪೈಲ್ ಅಲ್ಕೊಹಾಲ್ ಕೆಮಿಕಲ್ ಅಂಗಡಿಯಲ್ಲಿ ಸಿಗುತ್ತದೆ.