ಸನ್ಮಾರ್ಗ ವಾರ್ತೆ
ರಿಯಾದ್, ಮಾ. 12: ಭಾರತ ಸಹಿತ 12 ದೇಶಗಳಿಗೆ ಸೌದಿ ಅರೇಬಿಯ ಪ್ರಯಾಣ ನಿಷೇಧ ವಿಧಿಸಿದೆ. ಸೌದಿ ಇಖಾಮ ಇರುವವರು ಮರಳಲು 72 ಗಂಟೆಯ ಸಮಯ ನೀಡಲಾಗಿದೆ. ಭಾರತ ಸಹಿತ ಈ ಪಟ್ಟಿಯಲ್ಲಿರುವ ದೇಶಗಳಲ್ಲಿ 14 ದಿವಸ ಇದ್ದವರು ಸೌದಿಗೆ ಪ್ರಯಾಣಿಸುವಂತಿಲ್ಲ. ಪಾಕಿಸ್ತಾನ, ಶ್ರೀಲಂಕಾ, ಫಿಲಿಪ್ಪೈನ್ಸ್, ಸುಡಾನ್, ಇತಿಯೊಪಿಯ, ಎರಿಟ್ರಿ, ಕೆನಿಯ, ಜಿಬುಟ್ಟಿ, ಸೋಮಾಲಿಯ ದೇಶಗಳು ಭಾರತದ ಪಟ್ಟಿಯಲ್ಲಿದೆ.
ಜೋರ್ಡಾನಿಗೆ ಭೂಮಾರ್ಗ ಸಂಚಾರವನ್ನು ನಿಷೇಧಿಸಲಾಗಿದೆ. ಸರಕು ಸಾಗಣೆಗೆ ಅಡ್ಡಿಯಿಲ್ಲ. ಸೌದಿಯಲ್ಲಿ ಕೆಲಸ ಮಾಡುವ ಭಾರತೀಯರು ಮತ್ತು ಫಿಲಿಪ್ಪೀನಿಯರು ಮತ್ತು ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳು ಮರಳಲು ಅನುಮತಿ ನೀಡಲಾಗಿದೆ.












