ರೂಪಾಯಿ ಕುಸಿತ 17 ತಿಂಗಳಲ್ಲೇ ಅತೀ ಹೆಚ್ಚು

0
605

ಸನ್ಮಾರ್ಗ ವಾರ್ತೆ

ಮುಂಬೈ, ಮಾ. 12: ಕೊರೊನಾ ಆತಂಕ ರೂಪಾಯಿ ವಿನಿಮಯ ಮೌಲ್ಯದ ಮೇಲೆ ಕೆಟ್ಟ ಪ್ರಭಾವ ಬೀರಿದ್ದು ಡಾಲರ್ ಮುಂದೆ ರೂಪಾಯಿ ವಿನಿಮಯ ದರ 70 ಪೈಸೆ ಕಡಿಮೆಯಾಗಿದ್ದು 74.34 ರೂಪಾಯಿಯಾಗಿದೆ. ಕೊರೊನಾದಿಂದ ಡಾಲರ್ ಬೀಗಿದೆ. ಡಾಲರ್ ಗೆ 73.34 ರೂಪಾಯಿಯಂತೆ ವ್ಯಾಪಾರ ವಹಿವಾಟು ಶುರುವಾಗಿತ್ತು. ನಂತರ ಕುಸಿತ ದಾಖಲುಗೊಂಡಿದೆ. ಕೊರೊನಾವನ್ನು ಮಹಾಮಾರಿ ಎಂದು ವಿಶ್ವ ಆರೋಗ್ಯ ಸಂಘಟನೆ ಈಗಾಗಲೇ ಘೋಷಿಸಿದೆ. ಯುರೋಪಿಯನ್ ದೇಶಗಳು ಅಮೆರಿಕ ಪ್ರಯಾಣವನ್ನು ನಿಷೇಧಿಸಿದೆ. ನಂತರ ರೂಪಾಯಿ ಪರಿಸ್ಥಿತಿ ಇನ್ನಷ್ಟು ಕೆಟ್ಟುಹೋಯಿತು.

ಕೊರೊನಾ ವೈರಸ್ ಆತಂಕದಿಂದಾಗಿ ವಿದೇಶಿ ಹೂಡಿಕೆದಾರರು ಭಾರತದ ಮಾರುಕಟ್ಟೆಯಿಂದ ದೂರ ಹೋಗಿದ್ದಾರೆ. ಇದು ರೂಪಾಯಿ ಮೌಲ್ಯದ ಮೇಲೆ ಪ್ರಭಾವ ಬೀರಿತು. ಭಾರತದ ಶೇರು ಮಾರುಕಟ್ಟೆ ಇಂದು ನಷ್ಟದಲ್ಲಿ ವ್ಯಾಪಾರ ಶುರುಮಾಡಿತ್ತು. ಸೆನ್‍ಸೆಕ್ಸ್ ಸುಮಾರು 1600 ಪಾಯಿಂಟ್ ನಷ್ಟದಲ್ಲಿ ಮತ್ತು ನಿಫ್ಟಿ 545 ಪಾಯಿಂಟು ನಷ್ಟದಲ್ಲಿ ವ್ಯಾಪಾರಕ್ಕೆ ತೊಡಗಿತ್ತು.