ಅರ್ಸನಲ್‍ನ ಪ್ರಧಾನ ಫುಟ್‍ಬಾಲ್ ತರಬೇತುದಾರನಿಗೆ ಕೊರೊನಾ

0
479

ಸನ್ಮಾರ್ಗ ವಾರ್ತೆ

ಲಂಡನ್, ಮಾ. 13: ಇಂಗ್ಲಿಷ್ ಫುಟ್ಬಾಲ್ ಕ್ಲಬ್ ಅರ್ಸನಲ್‍ನ ಮುಖ್ಯ ತರಬೇತುದಾರ ಮೈಕಲ್ ಅರ್ಟಾಟರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಅರ್ಸನಲ್ ಕ್ಲಬ್ ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆಗೊಳಿಸಿದೆ. ವೈರಸ್ ಇರುವ ಸುದ್ದಿಯಾಗುವುದರೊಂದಿಗೆ ಲಂಡನಿನ ಅರ್ಸನಲ್ ತರಬೇತಿ ಮೈದಾನವನ್ನು ತಾತ್ಕಾಲಿಕವಾಗಿ ಮುಚ್ಚಿಬಿಡಲಾಯಿತು. ತರಬೇತಿದಾರನೊಂದಿಗೆ ಇದ್ದ ಆಟಗಾರರು ಮತ್ತು ಇತರ ಸಿಬ್ಬಂದಿಗಳನ್ನು ನಿಗಾದಲ್ಲಿರಿಸಲಾಗಿದೆ. ವೈರಸ್

ತಗುಲಿರುವ ಹಿನ್ನೆಲೆಯಲ್ಲಿ ಅರ್ಸನಲ್ ಬ್ರಟ್ಟಾ ನಡುವಿನ ಸ್ಪರ್ಧೆ ಮುಂದೂಡಲಾಗಿದೆ. ಇನ್ನು ಮುಂದಿನ ಸ್ಪರ್ಧೆಗಳ ಕುರಿತು ಈವತ್ತು ನಿರ್ಧರಿಸುವುದಾಗಿ ಅರ್ಸನಲ್ ಅಧಿಕಾರಿಗಳು ತಿಳಿಸಿದರು. ಇದು ನಿರಾಶೆಯ ಸುದ್ದಿ ಎಂದು 37 ವರ್ಷದ ಮೈಕಲ್ ಅರ್ಟಾಟ ಹೇಳಿದರು.