ಟ್ರಂಪ್ ಜೊತೆ ಔತಣದಲ್ಲಿದ್ದ ಬ್ರಝಿಲ್ ಉನ್ನತ ಅಧಿಕಾರಿಗೆ ಕೊರೊನಾ

0
510

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಮಾ. 13: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಆಹಾರ ಸೇವಿಸಿದ ಬ್ರಝಿಲ್‍ನ ಉನ್ನತ ಅಧಿಕಾರಿಗೆ ಕೊರೊನಾ ದೃಢಪಟ್ಟಿದ್ದು ಕೊರೊನಾ ಪೀಡಿತರು ಬ್ರಝಿಲ್ ಅಧ್ಯಕ್ಷರ ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ಫ್ಯಾಬಿಯೊ ಬಜ್‍ಗಾರ್ಟನ್‍ ರೆಂದು ವರದಿಯಾಗಿದೆ. ಮಾರ್ ಲೋಗೊದ ಡಿನ್ನರ್ ಪಾರ್ಟಿಯಲ್ಲಿ ಇವರು ಟ್ರಂಪ್ ಜೊತೆ ಆಹಾರ ಸೇವಿಸಿದ್ದರು. ಬ್ರಝಿಲ್ ಅಧ್ಯಕ್ಷ ಬೊಲ್‍ಸನಾರೊ, ಬ್ರಝಿಲ್ ರಕ್ಷಣಾ ಸಚಿವ ಅಸೆವೆಡೊ, ವಿದೇಶ ಸಚಿವ ಎನೆಸ್ಟೊ ಅರೌಜೊ, ಉದ್ಯಮ ಸುರಕ್ಷಾ ಸಚಿವ ಅಗಸ್ಟೊ ಹೆಲೊನೊ ಕೂಡ ಔತಣ ಕೂಟದಲ್ಲಿದ್ದರು.

ಟ್ರಂಪ್ ಜೊತೆ ಇದ್ದ ಫೋಟೊವನ್ನು ಫಾಬಿಯೊ ವಜ್‍ಗಾರ್ಟನ್ ಇನ್ಸ್‍ಟ್‍ಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.