ರೂಪಾಯಿ ದರದಲ್ಲಿ ಮತ್ತೆ ಕುಸಿತ

0
710

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ.13: ಕೊರೊನಾ ವೈರಸ್ ನಿಂದಾಗಿ ಆತಂಕ ಮುಂದುವರಿಯುತ್ತಿದ್ದು ರೂಪಾಯಿ ಮೌಲ್ಯ ಮತ್ತೆ ಕುಸಿತ ಕಂಡಿದೆ. ಇತಿಹಾಸದಲ್ಲಿ ಅತ್ಯಂತ ದೊಡ್ಡ ನಷ್ಟವನ್ನು ಈಗ ರೂಪಾಯಿ ಎದುರಿಸುತ್ತಿದೆ. ಡಾಲರ್ ಎದುರು 74.5075 ರೂಪಾಯಿಯಿಂದ ವ್ಯಾಪಾರ ಆರಂಭವಾಯಿತು.

ಕೊರೊನಾ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದ್ದು ಡಾಲರ್ ಹೂಡಿಕೆ ಮಾಡಲು ಹೂಡಿಕೆದಾರರು ಹೆಚ್ಚು ಆಸಕ್ತರಾಗಿದ್ದಾರೆ. ಇದು ರೂಪಾಯಿಯ ಮೌಲ್ಯ ಕುಸಿತಕ್ಕೆ ಪ್ರಧಾನ ಕಾರಣವಾಗಿ ಪರಿಣಮಿಸಿದೆ.

ಡಾಲರ್ ವಿರುದ್ಧ ರೂಪಾಯಿ ವಿನಿಮಯ ದರ ಗುರುವಾರ 70 ಪೈಸೆ ಕುಸಿದಿದ್ದು 74.34 ರೂಪಾಯಿಯಾಯಿತು. 17 ತಿಂಗಳಲ್ಲೆ ಕಡಿಮೆ ದರವಿದು. ರೂಪಾಯಿ ವಿನಿಮಯದಲ್ಲಿ ದೊಡ್ಡ ಕುಸಿತವೂ ಆಗಿದೆ ಎಂದು ವರದಿ ತಿಳಿಸಿದೆ.