ಸನ್ಮಾರ್ಗ ವಾರ್ತೆ
ಇರಾನ್, ಮಾ.13: ಇದುವರೆಗೆ ಇಲ್ಲಿ 429 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು ಕಳೆದ 24 ಗಂಟೆಗಳಲ್ಲಿ ಹೊಸದಾಗಿ 75 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಇದರೊಂದಿಗೆ ಇಲ್ಲಿ 10,000 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ವೈರಸ್ ವಿರುದ್ಧ ಹೋರಾಟಕ್ಕೆ ಇರಾನ್ ಅಂತಾರಾಷ್ಟ್ರ ನಾಣ್ಯ ನಿಧಿಯಿಂದ 500 ಕೋಟಿ ಡಾಲರ್ ಸಹಾಯ ಕೇಳಿದೆ. ಅಲ್ಜೀರಿಯ, ಪೊಲೆಂಡ್, ಆಸ್ಟ್ರೀಯಗಳಲ್ಲಿ ಮೊದಲ ಕೊರೊನಾ ಸಾವು ದೃಢಪಟ್ಟಿದ್ದು ಸ್ಫಾನಿಶ್ ಸಚಿವ ಐರಿನ್ ಮೊಂಡೊರೊಗೆ ವೈರಸ್ ಇರುವುದು ದೃಢಪಟ್ಟಿದೆ. ಉಪಪ್ರಧಾನಿ ಪಾಬ್ಲೊ ಇಗ್ಲಿಸಿಯಾಸ್‍ರನ್ನು ನಿಗಾದಲ್ಲಿರಿಸಲಾಗಿದೆ. ಮಾಡ್ರಿಡ್ ನಗರವನ್ನೇ ಮುಚ್ಚಿಬಿಡುವ ತಯಾರಿ ನಡೆಯುತ್ತಿದೆ.
ಸ್ಪೈನ್‍ನಲ್ಲಿ 84 ಮಂದಿ ಮೃತಪಟ್ಟಿದ್ದಾರೆ. 3000 ಸಾವಿರ ಮಂದಿಗೆ ವೈರಸ್ ಕಂಡು ಬಂದಿದೆ. ದಕ್ಷಿಣಾಫ್ರಿಕದಲ್ಲಿ ವೈರಸ್ ದೃಢಪಟ್ಟಿದೆ.
ಸಿಂಗಾಪರದಲ್ಲಿ ಐದು ದಿವಸಗಳಿಗೆ ಮಸೀದಿ ಮುಚ್ಚಲಾಗಿದೆ. ವೈರಸ್ ಬಾಧೆಯಿಂದ ಮಸೀದಿಗಳನ್ನು ಶುಚಿಗೊಳಿಸಲು ಮುಚ್ಚಲಾಗಿದೆ. ಮಲೇಶ್ಯದಲ್ಲಿ ನಡೆದ ಇಸ್ಲಾಮಿಕ್ ಸಮ್ಮೇಳನಕ್ಕೆ ಸಿಂಗಾಪುರದಿಂದ ಜನ ಬಂದಿದ್ದರು. ವಿವಿಧ ಧಾರ್ಮಿಕ ಸಂಘಟನೆಗಳು ಕಾರ್ಯಕ್ರಮ ಮಾಡುವುದನ್ನು ನಿಲ್ಲಿಸಿವೆ. 178 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಸಂದರ್ಶಕರಲ್ಲಿ ವೈರಸ್ ಬಾಧೆ ಕಂಡು ಬಂದದ್ದರಿಂದ ಮನಿಲದಲ್ಲಿರುವ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ಸಿಬ್ಬಂದಿಗಳು ಮನೆಯಲ್ಲಿಯೇ ಕೆಲಸ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ವೈರಸ್ ಹರಡುವುದನ್ನು ತಡೆಯಲು ಶ್ರೀಲಂಕಾ, ಅಯರ್ಲೆಂಡ್‍ನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ವಿಶ್ವಸಂಸ್ಥೆ ಮಾನವಹಕ್ಕು ಸಂಘಟನೆಗಳು ವಾರ್ಷಿಕ ಕಾರ್ಯಕ್ರಮವನ್ನೂ ರದ್ದುಪಡಿಸಿದೆ.












