ಸನ್ಮಾರ್ಗ ವಾರ್ತೆ
ರಿಯಾದ್, ಫೆ.15: ಸೌದಿ ಅರೇಬಿಯ ನಾಳೆ ರವಿವಾರದಿಂದ ಎಲ್ಲ ಅಂತಾರಾಷ್ಟ್ರೀಯ ವಿಮಾನ ಸರ್ವಿಸ್ ನಿಲ್ಲಿಸುತ್ತಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಕೊರೊನಾ ವೈರಸ್ ಭೀತಿಯಿಂದ ಅಲ್ಲಿನ ಸರಕಾರ ಇಂಥ ತೀರ್ಮಾನಕ್ಕೆ ಬಂದಿದ್ದು, ಎರಡು ವಾರಗಳವರೆಗೆ ಯಾವುದೇ ವಿಮಾನ ಹಾರಾಟ ಇಲ್ಲ ಎಂದು ವರದಿಯಾಗಿದೆ.
ಸೌದಿ ಅರೇಬಿಯದಲ್ಲಿ ಕೊರೊನಾ ಇದ್ದವರ ಸಂಖ್ಯೆ 86ಕ್ಕೇರಿಕೆಯಾಗಿದೆ. ಫ್ರಾನ್ಸಿನಿಂದ ಬಂದ ಸೌದಿ ಪ್ರಜೆಯ ಸಹಿತ 24 ಮಂದಿಗೆ ಹೊಸದಾಗಿ ಕೊರೊನಾ ತಗಲಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.












