ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 18: ಮುಸ್ಲಿಮರಲ್ಲದ ವಲಸಿಗರಿಗೆ ಮಾತ್ರ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾನೂನು ಸಂವಿಧಾನಾತ್ಮಕವಾಗಿದ್ದು ಕಾನೂನು ರಚಿಸುವ ಕೇಂದ್ರ ಸರಕಾರದ ಪರಮಾಧಿಕಾರವನ್ನು ಕೋರ್ಟು ಪ್ರಶ್ನಿಸುವಂತಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟಿಗೆ ತಿಳಿಸಿದೆ. ದೇಶವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಅದರ ವಿರುದ್ಧ ಸರಕಾರೀ ಪ್ರತೀಕಾರ ಕ್ರಮಗಳು ನಡೆದದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆಗಳಿಗೆ ದಾರಿಮಾಡಿದ ಕಾನೂನಿನ ವಿರುದ್ಧ ಸಲ್ಲಿಸಿದ ಅರ್ಜಿಯಲ್ಲಿ ಕೇಂದ್ರ ಸರಕಾರ ಹೀಗೆ ಉತ್ತರಿಸಿದೆ.
ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ಥಾನಗಳಿಂದ 2014ರ ಡಿಸೆಂಬರ್ ರ ಒಳಗೆ ಭಾರತಕ್ಕೆ ಬಂದ ಹಿಂದೂ ಕ್ರೈಸ್ತ, ಸಿಖ್, ಬುದ್ಧ, ಜೈನ, ಪಾರ್ಸಿ ನಿರಾಶ್ರಿತರಿಗೆ ಪೌರತ್ವ ನೀಡುವ ಧರ್ಮದ ಆಧಾರದ ಕಾನೂನನ್ನು ಸ್ವತಂತ್ರ ಭಾರತದಲ್ಲಿ ಬಿಜೆಪಿ ಸರಕಾರ ಮೊತ್ತಮೊದಲ ಬಾರಿ ರೂಪಿಸಿದೆ. ಧರ್ಮದ ಕುರಿತು ತಾರತಮ್ಯ ಇದ್ದು ಸಂವಿಧಾನದ ವಿರೋಧಿ ಕಾನೂನು ರದ್ದುಪಡಿಸಬೇಕೆಂದು ಅರ್ಜಿದಾರರು ವಾದಿಸಿದ್ದಾರೆ.
ಆದರೆ ಇದಕ್ಕೆ ಉತ್ತರ ನೀಡಿದ ಸರಕಾರವು, ಪಾರ್ಲಿಮೆಂಟು ಪೌರತ್ವ ಕಾನೂನು ನಿರ್ಮಿಸಿದ್ದು ಅದು ಅದರ ಪರಮಾಧಿಕಾರ ಎಂದು ಕೇಂದ್ರ ಸರಕಾರ ಕೋರ್ಟಿಗೆ ಹೇಳಿತು. ಸಂವಿಧಾನದ 246ನೆ ಪರಿಚ್ಛೇದದ ಏಳನೆ ಪಟ್ಟಿಯಲ್ಲಿ ಬರುವ ಯಾವ ವಿಷಯದಲ್ಲಿಯೂ ಕಾನೂನು ನಿರ್ಮಿಸುವ ಅಧಿಕಾರ ಪಾರ್ಲಿಮೆಂಟಿಗಿದೆ. ಅದರಲ್ಲಿ 17ನೇ ವಿಭಾಗ ಪೌರತ್ವಕ್ಕೆ ಸಂಬಂಧಿಸಿದ್ದು. ಪೌರತ್ವ ತಿದ್ದುಪಡಿ ಕಾನೂನು ಈಗಿನ ನೆಲೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗಳ ಅಧಿಕಾರವನ್ನು ಹನನ ಮಾಡುವುದಿಲ್ಲ. ಜನರ ಪ್ರಜಾಪ್ರಭುತ್ವ ಪರವಾದ ಕಾನೂನು ಪರವಾದ ಹಕ್ಕುಗಳಿಗೆ ಇದು ಬಾಧಕವಲ್ಲ ಎಂದು ಕೇಂದ್ರ ಅಫಿದಾವಿತ್ ಸಲ್ಲಿಸಿದೆ. ಇದು ಪೌರತ್ವ ತೆಗೆಯುವುದಿಲ್ಲ. ನೀಡುವ ಕಾನೂನು ಎಂದು ಬಿಜೆಪಿ ನಾಯಕರ ವಾದವನ್ನು ಅರ್ಜಿಯಲ್ಲಿ ಪುನರುಚ್ಚರಿಸಲಾಗಿದೆ. ಮೂರು ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರು ಯಾರೆಂದು ನಿರ್ಣಯಿಸುವ ಸಾಮರ್ಥ್ಯ ಪಾರ್ಲಿಮೆಂಟಿಗಿದೆ. ಕಾನೂನು ಎಲ್ಲರಿಗೂ ಸಮಾನವಾಗಿದ್ದಾದರೂ ಯುಕ್ತಿಯುತ ವರ್ಗೀಕರಣ ನಡೆಸುವ ಅಧಿಕಾರ ಸರಕಾರಕ್ಕಿದೆ ಎಂಬುದಕ್ಕೆ 20ಕ್ಕೂ ಹೆಚ್ಚು ಸುಪ್ರೀಂಕೋರ್ಟು ತೀರ್ಪುಗಳಿವೆ ಎಂದು ಸರಕಾರ ವಾದಿಸಿದೆ. ಸರಕಾರದ ಅಫಿದಾವಿತ್ ನ ಬೆನ್ನಿಗೆ ಅರ್ಜಿದಾರರಾದ ಮುಸ್ಲಿಂ ಲೀಗ್ ತನ್ನ ಉತ್ತರ ಅಫಿದಾವಿತ್ ಅನ್ನು ಸಲ್ಲಿಸಿತು.












